ಬೆಂಗಳೂರು: ಒಂದೆಡೆ ಕೊರೊನಾ ಮತ್ತೊಂದೆಡೆ ಓಮಿಕ್ರಾನ್ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸರ್ಕಾರ ಬ್ರೇಕ್ ಹಾಕಿದೆ.
ನಂದಿ ಗಿರಿಧಾಮ, ಕೆಮ್ಮಣ್ಣು ಗುಂಡಿ, ಕಲ್ಲೆತ್ ಗಿರಿ, ಕಾವೇರಿ ನದಿ, ಆವಲು ಬೆಟ್ಟ, ಬಂಗಾರು ಬೆಟ್ಟ, ಚಿಕ್ಕ ತಿರುಪತಿ, ದೇವರಾಯನದುರ್ಗ, ಕೆರೆ ತೊಣ್ಣೂರು, ಕೆಆರ್‍ಎಸ್ ಹಿನ್ನೀರು ಪ್ರದೇಶದಲ್ಲಿ ಜನ ಹೋಗುವಂತಿಲ್ಲ.
ಕುಂತಿಬೆಟ್ಟ, ಕುರುಡುಮಲೆ, ಮೇಲುಕೋಟೆ, ಸ್ಕಂದಗಿರಿ, ಕನಕಪುರ, ಸಂಗಮ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೋಟಿ ಲಿಂಗೇಶ್ವರ , ಸಿಗಂಧೂರು, ಶಿವಮೊಗ್ಗ, ಮಡಿಕೇರಿ, ಉತ್ತರ ಕರ್ನಾಟಕ, ಉತ್ತರ ಕನ್ನಡ, ಹಂಪಿ ಸೇರಿದಂತೆ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಹಲವು ತಾಣಗಳಲ್ಲೂ ಕೂಡ ನಿಷೇಧ ಹೇರಲಾಗಿದೆ.
ಈಗಾಗಲೇ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದ ತನಕ ನೈಟ್ ಕರ್ಫ್ಯೂವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಎಲ್ಲ ಪ್ರವಾಸಿ ತಾಣಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

