ರಾಜ್ಯದ ಜನತೆ ರಾಷ್ಟ್ರ ನಿರ್ಮಾಣದ ಕಡೆಯೂ ಗಮನ ಕೊಡಬೇಕಿದೆ-ಸಿಎಂ

ಬೆಂಗಳೂರು:ರಾಜ್ಯದ ಜನತೆ ರಾಷ್ಟ್ರ ನಿರ್ಮಾಣದ ಕಡೆಯೂ ಗಮನ ಕೊಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ನಮ್ಮ ದೇಶ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಗಣರಾಜ್ಯವಾಗಿದೆ. ರಾಷ್ಟ್ರ ನಿರ್ಮಾಣದ ಕಡೆಯೂ ಜನತೆ ಗಮನಹರಿಸಬೇಕೆಂದು ಮನವಿ ಮಾಡಿದರು.

ದೇಶ ಮೊದಲು ಎಂಬ ಅಭಿಮಾನ ಪ್ರತಿಯೊಬ್ಬರಲ್ಲೂ ಬರಬೇಕು. ರಾಷ್ಟ್ರ ನಿರ್ಮಾಣದ ಕಡೆ ವಿಶೇಷವಾಗಿ ಯುವಕರು ಗಮನಹರಿಸಬೇಕು. ಈ ದೇಶವು ನಮಗೆ ಬಹಳಷ್ಟು ಹಕ್ಕುಗಳನ್ನು ಕೊಟ್ಟಿದೆ. ಅದನ್ನು ನಿರ್ವಹಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಹಕ್ಕುಗಳ ಜತೆಗೆ ಜನತೆ ಕರ್ತವ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದರು.

ಆರ್ಥಿಕ, ಸಾಮಾಜಿಕ, ಕರಕುಶಲ ಕೊಡುಗೆ ಕೊಡುವ ರಾಜ್ಯ ಕರ್ನಾಟಕವಾಗಿದೆ. ಇದರ ಪರಂಪರೆಯನ್ನು ಉಳಿಸಿಕೊಂಡು ರಾಜ್ಯವನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಬೇಕೆಂದು ಬೊಮ್ಮಾಯಿ ಸಲಹೆ ಮಾಡಿದರು.

ಈ ದಿನ ಬಹುನಿರೀಕ್ಷಿತ ಗ್ರಾಮ ಒನ್ ಯೋಜನೆ ಉದ್ಘಾಟನೆಗೊಂಡಿದೆ. 12 ಜಿಲ್ಲೆಯ 3 ಸಾವಿರ ಗ್ರಾಮಪಂಚಾಯ್ತಿಗಳಲ್ಲಿ ಉದ್ಘಾಟನೆಯಾಗಲಿದೆ. ಸರ್ಕಾರದ ಯೋಜನೆಗಳನ್ನು ಈ ಯೋಜನೆ ಮೂಲಕ ಪಡೆಯಲು ಅನುಕೂಲವಾಗುತ್ತದೆ ಎಂದು ಸಿಎಂ ಹೇಳಿದರು.