ಇಬ್ರಾಹಿಂ ಜೆ ಡಿ ಎಸ್ ಗೆ ಬಂದರೆ ಪೂರ್ಣ ಸ್ವಾಗತ -ಎಚ್ ಡಿ ಕೆ

ಬೆಂಗಳೂರು:ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತವಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೆ ಡಿ ಎಸ್ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಸಿ.ಎಂ.ಇಬ್ರಾಹಿಂ ಹಿರಿಯ ನಾಯಕರು.ಕಾಂಗ್ರೆಸ್ ನಲ್ಲಿ ಅವರಿಗೆ ನೋವಾಗಿರಬಹುದು ಹಾಗಾಗಿ ಆ ಪಕ್ಷಕ್ಕೆ ಅವರು ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ ಅವರೇ ಹೇಳಿರುವ ಹಾಗೆ ಅಲ್ಲಿ ಅವರಿಗೆ ನೋವಾಗಿದೆ, ಅವರಿಗೆ ನಮ್ಮ ಪಕ್ಷದ ಬಾಗಿಲು ಸದಾ ತೆಗೆದಿರುತ್ತದೆ ಎಂದು ಹೇಳಿದರು.

ಈ ಮೊದಲು ಇಬ್ರಾಹಿಂ ಅವರು ನಮ್ಮ ಪಕ್ಷದಲ್ಲೇ ಇದ್ದವರು. ನಮ್ಮ ತಂದೆ ಎಚ್.ಡಿ.ದೇವೇಗೌಡರನ್ನು ಕಂಡರೆ ಬಹಳ ಪ್ರೀತಿ,ಗೌರವ ಇದೆ ಹಾಗಾಗಿ ಹಿಂದೆಯೂ ಒಮ್ಮೆ ನಮ್ಮ ಪಕ್ಷಕ್ಕೆ ಅವರು ಬರುವ ಮಾತಿತ್ತು. ಈಗ ಬಂದರೂ ನಮಗೆ ಸಂತಸವಾಗಲಿದೆ ಎಂದರು. ಯಾವುದೇ ಚುನಾವಣೆಯಲ್ಲೂ ನಮ್ಮ ಪಕ್ಷ ಬೇರೆ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.