ನವದೆಹಲಿ: ದೇಶದಲ್ಲಿ ಕೊರೊನ ಸೋಂಕು ಕಡಿಮೆಯಾಗುತ್ತಿದ್ದರೂ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದು ಆತಂಕಕಾರಿ ವಿಷಯವಾಗಿದೆ.
ದೇಶದಲ್ಲಿ ಒಂದೇದಿನ ಮೂರುವರೆ ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದರು ಇದೀಗ ಅದು ಕಡಿಮೆಯಾಗಿದೆ. ಒಂದೇ ದಿನ 2,09,918 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು 959 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ ಮೂರು ದಿನದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ.
ಭಾರತದಲ್ಲಿ ಒಟ್ಟು ಕೊರೊನಾ ಬಾದಿತರ ಸಂಖ್ಯೆ 4.13 ಕೋಟಿಗೆ ಏರಿದೆ. ಸಾವಿನ ಸಂಖ್ಯೆ 4,95,050 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಕ್ರಿಯ ಪ್ರಕರಣಗಳು 53,669 ರಷ್ಟು ಕಡಿಮೆಯಾಗಿ,ಚೇತರಿಕೆಯ ಪ್ರಮಾಣವು ಶೇಕಡಾ 94.37 ರಷ್ಟಿದೆ.ಕೇರಳದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ.

