ಮುಂಬೈನಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳ

ಮುಂಬೈ: ಮುಂಬೈನಲ್ಲಿ ಇತ್ತೀಚಿನ ಸುತ್ತಿನ ಸ್ವಾಬ್ ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್‌ನಲ್ಲಿ ಶೇ .95 ರಷ್ಟು ಮಾದರಿಗಳಲ್ಲಿ ಓಮಿಕ್ರಾನ್ ಸೋಂಕು ಇರುವುದು ಖಚಿತವಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ 2021 ರ ಡಿಸೆಂಬರಲ್ಲಿ ಕೋವಿಡ್ -19 ರ ಮೂರನೆ ಅಲೆಗೆ ನಾಂದಿ ಹಾಡಿತ್ತು.

ಇದೀಗ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಸೋಂಕು ಇಳಿಕೆ ಕಂಡಿದೆ.

ಆದರೆ ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿದ್ದರೂ ಸಾರ್ವಜನಿಕರು ಕೋವಿಡ್ ನಿಯಮಗಳ ಪಾಲನೆ ಮುಂದುವರಿಸಬೇಕು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಮನವಿ ಮಾಡಿದೆ.

ಮುಂಬೈನಲ್ಲಿ 192 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದವು. ಇದು 2021 ರ ಡಿಸೆಂಬರ್ 13 ರ ಬಳಿಕ ಅತಿ ಕಡಿಮೆ ದೈನಿಕ ಪ್ರಕರಣಗಳಾಗಿವೆ . 350 ಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.ಆದರೆ ಓಮಿಕ್ರಾನ್ ಸೋಂಕು ಹೆಚ್ಚಾಗಿರುವುದರಿಂದ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ಕೋರಿದ್ದಾರೆ.