ಹಿಜಬ್ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಹೈಕೋರ್ಟ್ ತ್ರಿ ಸದಸ್ಯ ಪೀಠದಲ್ಲಿ ಹಜಬ್ ವಿವಾದ ಸಂಬಂಧ ಮೂರನೆ ದಿನವಾದ ಬುಧವಾರ ಕೂಡಾ ವಿಚಾರಣೆ ನಡೆದು ಗುರುವಾರಕ್ಕೆ ಮುಂದೂಡಿಕೆಯಾಗಿದೆ.

ಮೊದಲಿಗೆ ಅರ್ಜಿದಾರರ ಪರ ಮಧ್ಯಂತರ ಅರ್ಜಿ ಸಲ್ಲಿಸಿದ್ದ ರವಿವರ್ಮ ಕುಮಾರ್ ವಾದ ಪ್ರಾರಂಭಿಸಿದರು.

ಶಿಕ್ಷಣ ಇಲಾಖೆ ಕಾಯ್ದೆಯನ್ನು ಅವರು ಈ ವೇಳೆ ಉಲ್ಲೇಖಿಸಿದರು.

ಹಿಜಬ್ ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಹಿಜಬ್ ಗೆ ಯಾವುದೇ ನಿರ್ಬಂಧವನ್ನೂ ಶಿಕ್ಷಣ ಇಲಾಖೆ ಹೇರಿಲ್ಲ, ಹಿಜಬ್ ಗೆ ಕಾನೂನು ರೀತಿ ನಿರ್ಬಂಧವಿಲ್ಲ ಹೀಗಿರುವಾಗ ಸರ್ಕಾರ ಏಕೆ ಇದನ್ನ ನಿರ್ಬಂಧಿಸುತ್ತಿದೆ ಎಂದು ರವಿವರ್ಮ ಕುಮಾರ್ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ನ್ಯಾಯ ಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ನಿರ್ಬಂಧ ಇಲ್ಲ ಅಂತ ಹೇಳಿ ಕಾಲೇಜಿಗೆ ಶಸ್ತ್ರಾಸ್ತ್ರ ಗಳನ್ನ ಕೊಂಡೊಯ್ಯಬಹುದೆ ಎಂದು ರವಿವರ್ಮ ಅವರಿಗೆ ಪ್ರಶ್ನಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸಮವಸ್ತ್ರ ನಿಗದಿ ಅಧಿಕಾರ ನೀಡಲಾಗಿದೆ, ಈ ಸಮಿತಿಗಳು ಪ್ರಾಧಿಕಾರ ಅಲ್ವಲ್ಲ ಎಂದು ರವಿವರ್ಮ ತಿಳಿಸಿದರು.

ಆ ಸಂದರ್ಭದಲ್ಲಿ ಸಮವಸ್ತ್ರ ಶಿಕ್ಷಣದ ಗುಣಮಟ್ಟದ ವ್ಯಾಪ್ತಿಗೆ ಬರುವುದಿಲ್ಲವೆ ಎಂದು ಸಿಜೆ ರಿತು ರಾಜ್ ಆವಸ್ಥಿ  ಪ್ರಶ್ನಿಸಿದರು.

ಅದಕ್ಕೆ ಇಲ್ಲ ಇದಕ್ಕಾಗಿಯೆ ಬೇರೆ ಪ್ರಾಧಿಕಾರ ಇದೆ.ಆದರೆ ಈ ಸಮಿತಿ ಪೊಲೀಸ್ ಅಧಿಕಾರ ಬಳಸಿಕೊಳ್ಳುತ್ತಿದೆ ಎಂದು ರವಿವರ್ಮ ಕುಮಾರ್ ಆಕ್ಷೇಪಿಸಿದರು.

ಆಗ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್  ಕಾಲೇಜು ಅಭಿವೃದ್ಧಿ ಸಮಿತಿಗೆ ಸಮವಸ್ತ್ರ ನಗದಿಪಡಿಸುವ ಅಧಿಕಾರ ಇಲ್ಲ ಎಂಬುದನ್ನು ನಾನು ಒಪ್ಪುತ್ತೇನೆ,ಆದರೆ ಈ ಸಮಿತಿ ಪೊಲೀಸ್ ಅಧಿಕಾರ ಬಳಸಿಕೊಳ್ಳುತ್ತಿದೆ ಎಂಬುದನ್ನು ಒಪ್ಪಲಾಗದು ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿಗಳ ಯೋಗ ಕ್ಷೇಮವನ್ನು ನೋಡಿಕೊಳ್ಳುವ ಅಧಿಕಾರ ಶಾಸಕರಿಗೆ  ಇರಬಾರದು ಎಂದು ರವಿವರ್ಮ ಹೇಳಿದರು.

ಮುಂದುವರಿದು ವಾದಮಾಡಿದ ಅವರು ದಕ್ಷಿಣ ಭಾರತದಲ್ಲಿ ಹಲವಾರು ಶಿಕ್ಷಕರು ಇತರರು ಹಣೆಗೆ ತಿಲಕ ಇಡುತ್ತಾರಲ್ಲ ಎಂದು ಗಮನ ಸೆಳೆದರು.

ಶೇ.56ರಷ್ಟು ಮಂದಿ ಧಾರ್ಮಿಕ ಪೆಂಡೆಂಟ್ ಧರಿಸ್ತಾರೆ,ಶೇ.84ರಷ್ಟು ಮಂದಿ ಮುಸ್ಲಿಮರು ಗಡ್ಡದ ಜತೆ ಟೋಪಿ ಧರಿಸ್ತಾರೆ,ಶೇ.86ರಷ್ಟು ಮಂದಿ  ಸಿಕ್ಕರು ಗಡ್ಡ ಬಿಡ್ತಾರೆ ಎಂದು ಹೇಳಿದರು.

ಸಿಖ್ ವಿದ್ಯಾರ್ಥಿಗಳು ಟರ್ಬನ್ ಹಾಕುತ್ತಾರೆ, ಕ್ರಿಶ್ಚಿಯನ್ ವಿದ್ಯಾರ್ಥಿಗಳು ಕ್ರಾಸ್ ಧರಿಸುತ್ತಾರೆ  ಆದರೆ ಅವರಿಗೆ ನಿರ್ಬಂಧ ಇಲ್ಲ ಹಿಜಬ್ ಗೆ ಮಾತ್ರ ಏಕೆ ನಿರ್ಬಂಧ ಎಂದು ನ್ಯಾಯಪೀಠಕ್ಕೆ ರವಿವರ್ಮ ಕುಮಾರ್ ಪ್ರಶ್ನಿಸಿದರು.

ಧರ್ಮವನ್ನ ಪ್ರತ್ಯೇಕವಾಗಿ ನೋಡುವ ಕೆಲಸ ಆಗಬಾರದು ಇದು ಒಳ್ಳೆಯ ಬೆಳವಣಿಗೆ ಅಲ್ಲ  ಎಂದು ಹೇಳಿದರು.

ಧಾರ್ಮಿಕ ಕಾರಣಕ್ಕೆ ಪ್ರತ್ಯೇಕ ಮಾಡಬಾರದು ,ಸರ್ಕಾರ ಅರ್ಜಿದಾರರ ಸಮುದಾಯದವರನ್ನ ಶಿಕ್ಷಣ ದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ನ್ಯಾಯಾಧೀಶರ ಗಮನ ಸೆಳೆದರು.

ವಾದಗಳನ್ನು ಆಲಿಸಿದ ಹೈಕೋರ್ಟ್ ತ್ರಿಸದ್ಯ ಪೀಠ ವಿಚಾರಣೆಯನ್ನು ಗುರುವಾರ ಮಧ್ಯಾಹ್ನಕ್ಕೆ ಮುಂದೂಡಿತು.