ಬೆಂಗಳೂರು: ಕಾಂಗ್ರೆಸ್ ನವರು ಸದನದಲ್ಲಿ ಆರಾಮಾಗಿ ನಿದ್ರೆ ಮಾಡಲಿ. ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ವಜಾ ಮಾಡುವುದಾದರೆ ಕಾಂಗ್ರೆಸ್ ನವರನ್ನು ಮಾಡಬೇಕು.ಸಚಿವ ಈಶ್ವರಪ್ಪನವರಲ್ಲ ಎಂದರು.
ಕಾಂಗ್ರೆಸ್ ನವರಿಗೆ ನೈತಿಕತೆ ಇಲ್ಲ, ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ನಾವು ರಾಷ್ಟ್ರಧ್ವಜ ಹಾರಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ನವರು ಸದನದಲ್ಲಿ ಧರಣಿ ಮಾಡಲಿ, ನಿದ್ರೆ ಮಾಡಲಿ ಬೇಡ ಎನ್ನುವುದಿಲ್ಲ. ಈಗಿರುವ ಕಾಂಗ್ರೆಸ್ ನಕಲಿ ಕಾಂಗ್ರೆಸ್ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಅಲ್ಪ ಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲಾ ನಾಟಕ,ಒಂದು ರೀತಿಯ ಶೋ ಅಂತಾ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಹೇಳಿದ್ದಾರೆ. ನಿನ್ನೆ ಸದನದಲ್ಲಿ ನಡೆದ ವರ್ತನೆ ಕಾಂಗ್ರೆಸ್ ನ ಗೂಂಡಾಗಿರಿಯಾಗಿದೆ ಎಂದು ಅಶೋಕ್ ಆರೋಪಿಸಿದರು.

