ಸಿದ್ದು ಹುಚ್ಚರಂತೆ ಮಾತನಾಡಿದ್ದಾರೆ -ಬಿಎಸ್ ವೈ ಗರಂ

ಬೆಂಗಳೂರು: ಆರ್ ಎಸ್ ಎಸ್ ದೇಶದ್ರೋಹದ ಕೆಲಸ ಮಾಡಿದ್ದರೆ ಅದರ ಬಗ್ಗೆ ಒಂದೇ ಒಂದು ಸಾಕ್ಷಿ ತೋರಿಸಲಿ ಎಂದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಪಿಎಫ್‌ಐ ನಿಷೇಧಿಸಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ‌ಅವರು ಹುಚ್ಚರಂತೆ ಮಾತನಾಡಿದ್ದಾರೆ,ಆರ್ ಎಸ್ ಎಸ್‌ ಮೇಲೂ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಪಿಎಫ್‌ಐ ದೇಶದ್ರೋಹದ ಕೆಲಸ ‌ಮಾಡುತ್ತಿರುವ ಬಗ್ಗೆ ‌ಸಾಕ್ಷ್ಯಗಳನ್ನು ಸಂಗ್ರಹಿಸಿಯೇ ಕೇಂದ್ರ ಸರ್ಕಾರ ಅದನ್ನು ನಿಷೇಧಿಸಿದೆ.ಆದರೆ ಆರ್ ಎಸ್ ಎಸ್ ಅಂತಹ ಕೆಟ್ಟ ಸಂಘಟನೆಯೇ ಅಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಏನಾಗಿದೆಯೋ, ಮುಖ್ಯ ಮಂತ್ರಿ ಯಾಗಿದ್ದವರು,ತೂಕದ ಮಾತುಗಳನ್ನಾಡಬೇಕೇ ಹೊರತು ಮನಸಿಗೆ ಬಂದಂತೆ ಆಡಬಾರದು ಎಂದರು.

ಆರ್ ಎಸ್ ಎಸ್ ಒಂದು ಹಿಂದೂ ಸಂಘಟನೆ .ದೇಶೋದ್ದಾರಕ್ಕೆ,ಧರ್ಮದ ಉದ್ದಾರಕ್ಕೆ ಶ್ರಮಿಸುತ್ತಿದೆ ಅದು ಯಾವುದೇ ದೇಶ ದ್ರೋಹದ ಕೆಲಸ ಮಾಡುತ್ತಿಲ್ಲ.ಹುಚ್ಚರಂತೆ ಏನೇನೋ ಹೇಳಬಾರದು ಎಂದು ಯಡಿಯೂರಪ್ಪ ಸಿದ್ದು ‌ವಿರುದ್ಧ ಗರಂ‌ ಆದರು.