ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದೂಗೆ ಕಾರ್ಯಕರ್ತರ ಆಗ್ರಹ

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಬೆಂಬಲಿಗರು ಒತ್ತಾಯಿಸಿದ್ದಾರೆ.

ಕೋಲಾರದಿಂದ ಕಾರ್ಯಕರ್ತರು ಮೈಸೂರಿಗೆ ಆಗಮಿಸಿ ಸಿದ್ಧರಾಮಯ್ಯ ಅವರನ್ನ ಭೇಟಿ ಮಾಡಿ ಮಾಡಿದ್ದಾರೆ.

ಮೈಸೂರಿನ ಆಂದೋಲನ ವೃತ್ತದ ಬಳಿ ಇರುವ ಪಾರ್ಕ್ ನಲ್ಲಿ ಸಿದ್ಧರಾಮಯ್ಯ ಬೆಳಿಗ್ಗೆ ವಾಕಿಂಗ್ ಮಾಡುವ ವೇಳೆ ಕೋಲಾರದಿಂದ ಬಂದಿದ್ದ 30ಕ್ಕೂ ಹೆಚ್ಚು ಕಾರ್ಯಕರ್ತರು ಸಿದ್ದುರವರನ್ನು ಭೇಟಿ ಮಾಡಿದರು.

ಈ ವೇಳೆ  ಬೆಂಬಲಿಗರು ಮುಂದಿನ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ಧರಾಮಯ್ಯಗೆ ಒತ್ತಾಯ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ನಾನೇ ಒಂದು ದಿನ ಅಲ್ಲಿಗೆ ಬಂದು ಮಾತನಾಡುತ್ತೇನೆ ಎಂದು ತಿಳಿಸಿದರು.