ಬೆಂಗಳೂರು: ಶನಿವಾರ ಅ. 29 ನಟ ಪುನೀತ್ ರಾಜ್ ಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆಯ ದಿನವಾಗಿದೆ.
ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಬಳಿ ಇರುವ ನಟ ಅಪ್ಪು ಸಮಾಧಿಗೆ ದೊಡ್ಮನೆ ಕುಟುಂಬ ಪೂಜೆ ಸಲ್ಲಿಸಿ ಅಪ್ಪು ಸ್ಮರಣೆ ಮಾಡಿದರು.
ನಟ ಪುನೀತ್ ರಾಜ್ ಕುಮಾರ್ ಅವರಿಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ಮಾಡಿದರು.
ಮೊದಲು ಡಾ. ರಾಜ್ ಕುಮಾರ್ ಪಾರ್ವತಮ್ಮ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಅಪ್ಪು ಸಮಾಧಿಗೆ ಪೂಜೆ ಮಾಡಲಾಯಿತು.
ಹಿರಿಯ ನಟ ರಾಘವೇಂಧ್ರ ರಾಜ್ ಕುಮಾರ್ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಟ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಪೂರ್ಣಿಮಾ, ಲಕ್ಷ್ಮೀ, ವಿನಯ್ ರಾಜ್ ಕುಮಾರ್, ಚಿನ್ನೇ ಗೌಡ , ಗೋವಿಂದರಾಜ್ ಅವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಅಶ್ವಿನಿ ಅವರು ಪುನೀತ್ ನೆನೆದು ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಸಾಗರವೇ ಸಮಾಧಿ ಬಳಿಗೆ ಹರಿದು ಬಂದಿತ್ತು.
ಸರತಿಯ ಸಾಲಿನಲ್ಲಿ ಆಗಮಿಸಿ ಅಪ್ಪು ಸಮಾದಿಯ ದರ್ಶನ ಪಡೆದರು.
ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಸಹಾ ಮಾಡಲಾಗಿತ್ತು.
ಅಭಿಮಾನಿಗಳು ರಕ್ತದಾನ ಶಿಬಿರ ಕೂಡಾ ಹಮ್ಮಿಕೊಂಡು ರಕ್ತದಾನ ಮಾಡಿದುದು ವಿಶೇಷವಾಗಿತ್ತು.
ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದರು.

