ಸಾಂಸ್ಕೃತಿಕ ನಗರಿಯಲ್ಲಿ ಬೆಳ್ಳಂಬೆಳಿಗ್ಗೆ ಎನ್ಐಎ ದಾಳಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಎನ್ಐಎ ದಾಳಿ ಮಾಡಿದೆ.

ಅಲ್ಲದೆ ಮೈಸೂರಿನ ಪಿಎಫ್ಐ ಮಾಜಿ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ.

ಸುಲೈಮಾನ್ ಬಂಧಿತ ಆರೋಪಿ.

ಶನಿವಾರ ಬೆಳಿಗ್ಗೆ ಮೈಸೂರಿನ ಮಂಡಿಮೊಹಲ್ಲಾದಲ್ಲಿರುವ ಸುಲೈಮಾನ್ ಮನೆ ಮೇಲೆ ದಾಳಿ ಮಾಡಲಾಗಿದೆ.

ಅಜ್ಞಾತ ಸ್ಥಳದಲ್ಲಿ ಸುಲೈಮಾನ್ ನನ್ನು ಎನ್ ಐ ಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇಷ್ಟೇ ಅಲ್ಲ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ಐಎ ತನಿಖೆ ಚುರುಕುಗೊಳಿಸಿದೆ.

ಜತೆಗೆ ಬೆಳ್ಳಾರೆ ಗ್ರಾ.ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಸುಳ್ಯದ ಇಬ್ರಾಹಿಂ ಶಾರನ್ನು ಕೂಡಾ ಬಂಧಿಸಲಾಗಿದೆ.

ಎನ್ಐಎ ತಂಡ ಉಪ್ಪಿನಂಗಡಿ,ಸುಳ್ಯದಲ್ಲಿ ಕೂಡಾ ಕಾರ್ಯಾಚರಣೆ ನಡೆಸಿದೆ.