ರ‍್ಯಾಪಿಡೊ ಮತ್ತು ಓಲಾ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಮೈಸೂರು: ರ‍್ಯಾಪಿಡೊ ಮತ್ತು ಓಲಾ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂಎಆರ್ ಎಸ್(ಮೈಸೂರು ಆಟೋರಿಕ್ಷಾ‌ ಸರ್ವಿಸ್) ವತಿಯಿಂದ ಆರ್ ಟಿ ಒ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ರಾಜ್ಯ ‌ಉಚ್ಛ ನ್ಯಾಯಾಲಯದಲ್ಲಿ ವಕೀಲರಾದ ಸೂರ್ಯಕುಮಾರ್ ಅವರ ಮೂಲಕ ರ‍್ಯಾಪಿಡೊ ಮತ್ತು ಓಲಾ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸುವಂತೆ ದಾವೆ ಹೂಡುವುದಾಗಿ ಎಂಎಆರ್ ಎಸ್ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.

ರ‍್ಯಾಪಿಡೊ ಮತ್ತು ಓಲಾ ವಾಹನಗಳಿಂದಾಗಿ ಸಾಮಾನ್ಯ ಆಟೋ ಚಾಲಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕಾನೂನು ಬಾಹಿರವಾಗಿ ಧರ ನಿಗದಿ ಮಾಡಿಕೊಂಡು ಆಟೋಗಳಿಗೆ ಪರ್ಯಾಯವಾಗಿ ರ‍್ಯಾಪಿಡೊ ಮತ್ತು ಓಲಾ ವಾಹನಗಳು ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ.

ಇದರಿಂದಾಗಿ ಸಾಮಾನ್ಯ ಆಟೋರಿಕ್ಷ ಚಾಲಕರಾದ ನಮಗೆ ಹೊಡೆತ ಬೀಳುತ್ತಿದೆ.

ಇವರಿಂದಾಗಿ ತೋಂದರೆಯಾಗುತ್ತಿರುವುದರಿಂದ ರ‍್ಯಾಪಿಡೊ ಮತ್ತು ಓಲಾ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ವಕೀಲರ ಮೂಲಕ ದಾವೆ ಹೂಡುತ್ತಿದ್ದೇವೆ ಎಂದು ನಾಗರಾಜ್ ತಿಳಿಸಿದ್ದಾರೆ.