ನವದೆಹಲಿ: ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಭಾರತದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಎನ್ ಐಎ ಹೇಳಿದೆ.
ಕೇಂದ್ರ ಗುಪ್ತಚರ ವಿಭಾಗ ದಾವೂದ್ ನ ಈ ಸಂಚನ್ನು ಪತ್ತೆ ಮಾಡಿದೆ.
ಡಿಕಂಪನಿ ಮೂಲಕ ದಾವೂದ್ ಇಬ್ರಾಹಿಂ ಭಾರತದ 6 ನಗರಗಳಲ್ಲಿ ಉಗ್ರರರಿಂದ ವಿಧ್ವಂಸಕ ಕೃತ್ಯ ನಡೆಸಲು ಭಾರೀ ಮೊತ್ತದ ಹಣ ಹೂಡಿಕೆ ಮಾಡಿದ್ದಾನೆ ಎಂದು ಎನ್‍ಐಎ ತಿಳಿಸಿದೆ.
ಈ ಹಿಂದೆ ಮುಂಬೈನಲ್ಲಿ ನಡೆಸಿದ ಮಾರಣಹೋಮದಂತೆ ದೇಶದ ಪ್ರಮುಖ ನಗರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ದಾವೂದ್ ಕಡೆಯ ಉಗ್ರರು ಸಜ್ಜಾಗಿದ್ದಾರೆ.
ವಿಶೇಷವಾಗಿ ರಾಜಕಾರಣಿಗಳು, ಉದ್ಯಮಿಗಳು, ಚಿತ್ರರಂಗದ ಗಣ್ಯರು, ವಿಜ್ಞಾನಿಗಳು ಇವರ ಹಿಟ್‍ಲಿಸ್ಟ್‍ನಲ್ಲಿದ್ದಾರೆ ಎಂದು ಗುಪ್ತಚರ ವಿಭಾಗ ತಿಳಿಸಿದೆ.
ದಾವೂದ್ ಇಬ್ರಾಹಿಂ ಆಪ್ತ ಚೋಟಾ ಶಕೀಲ್ ಭಾರತದಲ್ಲಿ ದಾಳಿ ನಡೆಸಲು ಆಯ್ದ ಉಗ್ರರಿಗೆ ಭಾರೀ ಮೊತ್ತದ ಹಣ ನೀಡಿದ್ದಾನೆ.
ಈಗಾಗಲೇ ಬಂಧನದಲ್ಲಿರುವ ಆರೀಫ್ ಅಬುಬಕರ್ ಶೇಖ್, ಶಬ್ಬೀರ್ ಅಬಬಕರ್ ಶೇಖ್ ಮತ್ತು ಮೊಹಮ್ಮದ್ ಸಲೀಂ ಖುರೇಷಿ ತನಿಖಾ ವೇಳೆ ಇಂತಹ ಕೆಲವು ಆಘಾತಕಾರಿ ಅಂಶಗಳನ್ನು ಹೊರ ಹಾಕಿದ್ದಾರೆ.
ಹವಾಲಾ ಮೂಲಕ ದುಬೈನಿಂದ ಹಣ ಉಗ್ರರಿಗೆ ತಲುಪಿದೆ. ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಬೇಕೆಂದು ಎನ್‍ಐಎ ಗೃಹ ಇಲಾಖೆಗೆ ಶಿಫಾರಸ್ಸು ಮಾಡಿದೆ.

