ಕನಕದಾಸರ ಸಾಹಿತ್ಯ ಮನುಕುಲಕ್ಕೆ ಮಾದರಿ-ಮೇಯರ್ ಶಿವಕುಮಾರ್

ಮೈಸೂರು: ದಾಸರ ಪದಗಳು ಹಾಗೂ ಸಾಹಿತ್ಯದ ಮೂಲಕ ವಿಶ್ವಕ್ಕೆ ಮಾದರಿ ಯಾದವರು ಕನಕದಾಸರು ಎಂದು ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಶಿವಕುಮಾರ್ ಹೇಳಿದರು.

ನಗರದ ಭಾರತೀಯ ಜನತಾ ಪಕ್ಷದ  ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಕನಕದಾಸರ ೫೩೫ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂತಹ ಮಹಾನ್ ಪುರುಷರ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಿ ಅವರ ಸಾಹಿತ್ಯ ಭಂಡಾರವನ್ನು ಹಾಗೂ ಅವರ ತತ್ವ ಸಿದ್ದಾಂತವನ್ನು ಸಾರ್ವಜನಿಕರಿಗೆ ತಿಳಿಸುತ್ತಿರುವುದು ಶ್ಲಾಘನೀಯ.

ಇದಕ್ಕೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಾರಣ ಎಂದರು.

ಉಪಮೇಯರ್ ಡಾ.ರೂಪ,ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬಣ್ಣ, ನಗರ ಪಾಲಿಕೆ ಸದಸ್ಯ ಜಗದೀಶ್, ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿಮಂಜು,ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು,ಚಿಕ್ಕಮ್ಮ ಬಸವರಾಜ್, ಕಮಲಮ್ಮ, ಪೂರ್ಣಿಮಾ,ಹೇಮಾ ಗಂಗಪ್ಪ, ಗೋಪಾಲ್‌, ರವಿತೇಜ,ಕೇಬಲ್‌ ಮಹೇಶ್, ಶಿವರಾಜ್, ಹರೀಶ್, ರಮೇಶ್ ಹಿರಿಯಣ್ಣ, ಶರತ್, ರಾಜು ಮುಂತಾದವರು ಹಾಜರಿದ್ದರು.