ಮೈಸೂರು: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಶನಿವಾರ ಮಧ್ಯಾಹ್ನ ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ
ಯುವ ಭಾರತ್ ಸಂಘಟನೆಯವರು ಪ್ರಯಾಣಿಕರನ್ನು ಸ್ವಾಗತಿಸಿ ರೈಲಿನ ಚಾಲಕರಿಗೆ ಸನ್ಮಾನಿಸಿ ಸಿಹಿ ವಿತರಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಪ್ರತಾಪ್ ಸಿಂಹ ರವರಿಗೆ ಘೋಷಣೆ ಕೂಗಿ ಸಂಭ್ರಮಿಸಿದರು
ಈ ವೇಳೆ ಮಾತನಾಡಿದ ಸಂಘಟನೆಯ ಸಂಚಾಲಕ ಜೋಗಿಮಂಜು, ಈ ರೈಲು ಮೈಸೂರಿನಿಂದ ಚೆನ್ನೈಗೆ ಕಡಿಮೆ ಅವಧಿಯಲ್ಲಿ ತಲುಪಲಿದೆ.
ಇದರಿಂದ ನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೈಸೂರಿನಿಂದ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ,ಈ ರೈಲು ಸಂಚಾರ ಪ್ರಾರಂಭಿಸಿರುವುದು ತುಂಬಾ ಸಂತೋಷದ ದಿನ ಎಂದರು.
ದಕ್ಷಿಣ ಭಾರತದ ಅಂತರ್ ರಾಜ್ಯದ ತಮಿಳು ನಾಡು ಹಾಗೂ ಕರ್ನಾಟಕದ ಬಾಂಧವ್ಯ ಇನ್ನೂ ಹೆಚ್ಚಲಿದೆ ಹಾಗೆಯೇ ಮೈಸೂರು, ಮಂಡ್ಯ,ಹಾಸನ,ಚಾಮರಾಜನಗರ, ಕೊಡಗು ಭಾಗದ ಜನರಿಗೆ ಅನುಕೂಲವಾಗಲಿದೆ.
ಅಲ್ಲದೆ ಈ ಭಾಗದ ಪ್ರವಾಸೋದ್ಯಮ,ಕೈಗಾರಿಕೆಗೆ ಹೆಚ್ಚು ಪ್ರೊತ್ಸಾಹ ಸಿಗುತ್ತದೆ ಎಂದು ಹೇಳಿದರು.
ರೈಲು ಕೇವಲ 1.30 ನಿಮಿಷ ಕ್ಕೆ ಬೆಂಗಳೂರು ತಲುಪುತ್ತವೆ, ಈ ಕಾರ್ಯಕ್ಕೆ ಸಹಕಾರ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಂಸದ ಪ್ರತಾಪ್ ಸಿಂಹ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ರವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಕೇಬಲ್ ಮಹೇಶ್ ,ಅಪೂರ್ವ ಸುರೇಶ್ ,ಸಂದೇಶ ,ಅಜಯ್ ಶಾಸ್ತ್ರಿ ,ಪ್ರಮೋದ್ ಗೌಡ, ಉಮೇಶ್,ರವಿತೇಜಾ,ಸುರೇಂದ್ರ, ಶಿವಪ್ರಕಾಶ್, ನಂದಕುಮಾರ್, ಸಂದೀಪ್, ಶರತ್,ಮಹೇಂದ್ರ ಶೈವ, ಧರ್ಮೇಂದ್ರ ಮತ್ತಿತರರು ಹಾಜರಿದ್ದರು.

