ಮೈಸೂರು: ಅಡ್ಡಾದಿಡ್ಡಿ ಕಾರು ಓಡಿಸುತ್ತಿದ್ದವರಿಗೆ ಬುದ್ದಿ ಮಾತು ಹೇಳಿದ ಹಿನ್ನಲೆ ಮೂವರು ಯುವಕರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಘಟನೆ ನಗರದ ಟಿ.ಕೆ.ಲೇಔಟ್ ನಲ್ಲಿ ನಡೆದಿದೆ.
ಈ ಘಟನೆಯಲ್ಲಿ
ಮೂರು ಮಂದಿ ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೇಗವಾಗಿ ಬಂದ ಫಾರ್ಚುನರ್ ಕಾರು ಯುವಕರಿದ್ದ ಕಾರಿಗೆ ಗುದ್ದಲು ಯತ್ನಿಸಿದ್ದು
ಈ ವೇಳೆ ಯುವಕರು ಪ್ರಶ್ನೆ ಮಾಡಿದ್ದಾರೆಯೇ.
ಇಷ್ಟಕ್ಕೇ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ.
ಕಾರಿನಲ್ಲಿದ್ದ ವಾಸು ಹಾಗೂ ಪುತ್ರ ದರ್ಶನ್ ರಿಂದ ಕೊಲೆ ಯತ್ನ ನಡೆದಿದೆ.
ಮತ್ತೊಂದು ಕಾರಿನಲ್ಲಿದ್ದ ಪ್ರಜ್ವಲ್, ರಾಹುಲ್, ಆನಂದ್ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಪ್ರಜ್ವಲ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಪ್ಪ ಮಗನ ದರ್ಪಕ್ಕೆ ಅಮಾಕ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಯುವಕರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ

