ಮೈಸೂರು: ವೆಂಕಟಾಚಲ ಅವದೂತರ ವರ್ಧಂತಿ ಅಂಗವಾಗಿ ವಿಶೇಷ ಚೇತನ ಮಕ್ಕಳಿಗೆ ಉಚಿತವಾಗಿ ಸಿಹಿ ತಿಂಡಿ ವಿತರಿಸಲಾಯಿತು.
ನಗರದ ಸರಸ್ವತಿ ಪುರಂನಲ್ಲಿರುವ ವಿಶೇಷ ಚೇತನ ಶಾಲೆಯಲ್ಲಿ ಸುಮಾರು 40 ಮಕ್ಕಳಿಗೆ ಸಿಹಿ ವಿತರಿಸಿ ವೆಂಕಟಾಚಲ ಅವಧೂತರ ವರ್ಧಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ನಂತರ ರೇಡಿಯೋ ಜಾಕಿ ಸುನೀಲ್ ಮಾತನಾಡಿ ವೆಂಕಟಾಚಲ ಅವದೂತರ ವರ್ಧಂತಿ ನಮ್ಮ ಹಿಂದು ಸಂಸ್ಕೃತಿಯ ಪ್ರತೀಕ ಎಂದು ಹೇಳಿದರು.
ನಾವೆಲ್ಲರೂ ಗುರು ಭಕ್ತಿ, ದೇಶ ಭಕ್ತಿಯ ಅನುಕರಣೆ ಮಾಡಬೇಕು,ದತ್ತಾತ್ರೇಯ ಆರಾಧನಾ ಮಾಡುವ ಮೂಲಕ ಆಧ್ಯಾತ್ಮಿಕ ಲೋಕಕ್ಕೆ ಶಕ್ತಿ ತುಂಬವ ಕೆಲಸ ಮಾಡೋಣ ಎಂದು ಹೇಳಿದರು.
ಮೈಸೂರು ಅವದೂತ ದತ್ತ ಸಾಯಿ ಪೀಠೀಕಾ ಜನ ಸೇವಾ ಟ್ರಸ್ಟ್ ಅಧ್ಯಕ್ಷ ರಿಷೀ ವಿಶ್ವ ಕರ್ಮ, ಸ್ವಸಹಾಯ ಸಮುಚ್ಚಯ (ಚೇತನ ಮತ್ತು ಕೌಶಲ) ವಿಶೇಷ ಚೇತನ ಮಕ್ಕಳ ಶಾಲೆಯ ಅಧ್ಯಕ್ಷರಾದ ಸವಿನಾ ,ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿಮಂಜು, ಚಂದ್ರು,ಶರತ್ ಕುಮಾರ್ ಭಂಡಾರಿ,ರಾಜೇಶ್ ಗೌಡ, ರಂಜನ್, ಶಿವಮ್ಮ,ಕೋಮಲ,ರಾಜೇಶ್ವರಿ ಪಾಲ್ಗೊಂಡಿದ್ದರು.

