ಮೈಸೂರು: ವಿಮಾನಗಳು ವೈಮಾನಿಕ ಹಾರಾಟ ನಡೆಸುವಾಗ ತುರ್ತು ಭೂ ಸ್ಪರ್ಶವಾದಾಗ, ಆಗಬಹುದಾದ ಸಂಭವನೀಯ ಅವಘಡಗಳ ಬಗೆಗೆ ಅಣುಕು ಪ್ರದರ್ಶನ ನಡೆಸಲಾಯಿತು.
ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ರಕ್ಷಣೆಯ ಬಗ್ಗೆ ಅಣುಕು ಪ್ರದರ್ಶನ ನಡೆಸಲಾಯಿತು
ಅವಘಡಗಳು ನಡೆದಾಗ ರಕ್ಷಣಾ ಪಡೆಯ ಎಲ್ಲ ಸಿಬ್ಬಂದಿ ಒಗ್ಗೂಡಿ ಕಾರ್ಯ ನಿರ್ವಹಿಸಿ, ಪ್ರಯಾಣಿಕರ ಜೀವ ರಕ್ಷಣೆಗೆ ಮುಂದಾಗುತ್ತಾರೆ.
ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನ ನಿಲ್ದಾಣ ರಕ್ಷಣಾ ಪಡೆ, ಅಗ್ನಿಶಾಮಕ ತಂಡ, ಪೊಲೀಸ್ ರಕ್ಷಣಾ ತಂಡ, ವೈದ್ಯಕೀಯ ತಂಡ ಹಾಗೂ ವಿವಿಧ ರಕ್ಷಣಾ ತಂಡಗಳು ಹಲವಾರು ಜೀವಗಳನ್ನು ರಕ್ಷಿಸುವ ಕುರಿತು ಯಶಸ್ವಿ ಪ್ರದರ್ಶನ ನಡೆಸಿಕೊಟ್ಟರು.

