ಮೈಸೂರಿನಲ್ಲಿ ಯಶಸ್ವೀ ಹನುಮೋತ್ಸವ

ಮೈಸೂರು: ಮೈಸೂರಿನಲ್ಲಿ ನಾಲ್ಕನೇ ಬಾರಿಗೆ ಯಶಸ್ವಿ ಹನುಮೋತ್ಸವ ನಡೆಯಿತು.

ಅರಮನೆ, ಕೋಟೆ ಆಂಜನೇಯ ಮುಂಬಾಗ ಹನುಮನ ಭವ್ಯ ಮೆರೆವಣಿಗೆಗೆ ಗಣ್ಯರು ಚಾಲನೆ ನೀಡಿದರು.

ವೇಳೆ ಮಾತನಾಡಿದ ಶಾಸಕ ಎಸ್. . ರಾಮದಾಸ್ ಯುವಪಡೆಗಳು ಹನುಮ ಜಯಂತಿ ಮಾಡುತ್ತಿರುವುದರಿಂದಲೆ ಇಂದಿಗೂ ಧರ್ಮ ಎದೆ ಉಬ್ಬಿಸಿ ನಿಂತಿದೆ ಎಂದು ಹೇಳಿದರು.

ಇಡೀ ನಾಡು ಹನುಮ ಜಯಂತಿ ಆಚರಿಸುತ್ತಿದೆ ಅದರಲ್ಲೂ ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ ಯುವಪಡೆಗೆ ಅತೀ ಹೆಚ್ಚು ಶಕ್ತಿಯನ್ನು ಹನುಮಂತ ನೀಡಲಿ ಎಂದು ಹಾರೈಸಿದರು.

ಮೂಡ ಮಾಜಿ ಅಧ್ಯಕ್ಷ ಎಚ್. ವಿ. ರಾಜೀವ್ ಮಾತನಾಡಿ ಆಂಜನೇಯ ಕಲಿಯುಗದ ಅತ್ಯಂತ ಜನಪ್ರಿಯ ದೇವರು ಎಂಬುದು ಹನುಮ ಜಯಂತಿಯನ್ನು ಅತ್ಯಂತ ಪ್ರೀತಿಯಿಂದ ಯುವಕರು ಆಚರಿಸುತ್ತಿರುವ ದೃಶ್ಯ ನೋಡಿದರೆ ಗೊತ್ತಾಗುತ್ತಿದೆ ಎಂದು ಹೇಳಿದರು.

ಸನಾತನ ಧರ್ಮ ಎದ್ದು ನಿಂತಿದೆ, ಸನಾತನ ಧರ್ಮದ ಉಳಿವಿಗೆ ಹನುಮ ಜಯಂತಿ ಅತ್ಯಂತ ಅವಶ್ಯಕ ಎಂದು ಹೇಳಿದರು

ಕಾಂಗ್ರೆಸ್ ಯುವ ಮುಖಂಡ ಪ್ರದೀಪ್ ಮಾತನಾಡಿ ನಾಡಿನ ಸರ್ವರಿಗು ಹನುಮಂತ ಒಳಿತು ಮಾಡಲಿ ನಮ್ಮ ಮೈಸೂರಿನ ಜನತೆಗೆ ಹೆಚ್ಚು ಆರೋಗ್ಯ ವೃದಿಸಲಿ ಎಂದು ಪ್ರಾರ್ಥಿಸಿದರು.

ಮೇಯರ್  ಶಿವಕುಮಾರ್, ಸಂಸದ ಪ್ರತಾಪ್ ಸಿಂಹ,ಮೈಸೂರು ಭಾಜಪ ಅಧ್ಯಕ್ಷ ಶ್ರೀವತ್ಸ,ಮಾಜಿ ಶಾಸಕ ಎಂ. ಕೆ. ಸೋಮಶೇಖರ್, ವಾಸು, ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ, ಮುರಳಿ, ಹನುಮೋತ್ಸವ ಸಮಿತಿಯ ಜೀವನ್, ಸಂಜಯ್ ದಾಸ್ ಮತ್ತಿತರರು ಪಾಲ್ಗೊಂಡಿದ್ದರು.