ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ; ವರದಿ ಆಧರಿಸಿ ಕ್ರಮ -ಸಿಎಂ

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯ ಕೇಳಿ ಬಂದಿದೆ, ಹಿಂದುಳಿದ ಆಯೋಗದ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಅವರು, ಸರ್ಕಾರ  ವರದಿ ಮಂಡನೆಗೆ ಸೂಚನೆ ನೀಡಿದೆ. ವರದಿ ಆಧರಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರ ಮೇಲಿರುವ ಕೇಸುಗಳ ಆಧಾರದ ಮೇಲೆ ಸಿಬಿಐ ಕ್ರಮ ಕೈಗೊಳ್ಳುತ್ತಿದೆ .  ಸಿಬಿಐ ಮುಂದೆ ಯಾವ ಕೇಸ್ ಇದೆ ಅನ್ನೋದು ಗೊತ್ತು.   ಸಿಬಿಐ ಅನ್ನೋದು ಸಂವಿಧಾನಿಕ ಸಂಸ್ಥೆ ಎಂದು ಬೊಮ್ಮಾಯಿ ತಿಳಿಸಿದರು.