ವಿದೇಶದಿಂದ ಬಂದ ನಾಲ್ವರಿಗೆ ಕೋವಿಡ್ ಪಾಸಿಟಿವ್ : ದೇಶದಲ್ಲಿ ಆತಂಕ ಶುರು

ಬೆಂಗಳೂರು: ಚೀನಾ ಮತ್ತಿತರ ದೇಶಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು ಭಾರತದಲ್ಲೂ  ಆತಂಕ ಶುರುವಾಗಿದೆ.

ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ  ತೆಗೆದುಕೊಳ್ಳುತ್ತಿದೆ.

ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ನಡೆಸುತ್ತಿದ್ದು,ಸೋಮವಾರ ಬೆಂಗಳೂರಿಗೆ ಬಂದ 119 ಮಂದಿಗೆ ಟೆಸ್ಟ್ ಮಾಡಲಾಗಿದೆ.ಅವರಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಇದರಿಂದಾಗಿ ನಮ್ಮ ದೇಶದಲ್ಲೂ ಆತಂಕ ಶುರುವಾಗಿದೆ.

ನಾಲ್ವರನ್ನ ಐಸೋಲೇಷನ್ ಮಾಡಲಾಗಿದ್ದು ಇದರೊಂದಿಗೆ ವಿದೇಶದಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ 19 ಕ್ಕೆ ಏರಿಕೆಯಾದಂತಾಗಿದೆ.

ದುಬೈ,ಮಾಲ್ಡೀವ್ಸ್ ಅಬುದಾಬಿ,ಜರ್ಮನ್,ಹಾಂಕಾಂಗ್ ಮತ್ತಿತರ ದೇಶಗಳಿಂದ ಹಲವಾರು ಮಂದಿ ದೇಶಕ್ಕೆ ಹಿಂದಿರುಗಿದ್ದು ಪಾಸಿಟಿವ್ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.