ಕೋವಿಡ್ ನಿಯಮ ಪಾಲಿಸಿ; ಡಾ.ಸುಧಾಕರ್  ಮನವಿ

ಬೆಳಗಾವಿ: ಬಿ‌ ಎಫ್-7 ವೈರಸ್ ಎಷ್ಟರ ಮಟ್ಟಿಗೆ ಡೇಂಜರ್‌ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.

ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಸಧ್ಯ ಯಾವುದೇ ಆತಂಕ ಇಲ್ಲ,ಆದರೂ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ತಪಾಸಣೆ ಕಡ್ಡಾಯವಾಗಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಜನ‌ ನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಒಳ್ಳೆಯದು,ಆದರೆ ಸರ್ಕಾರ ಇದನ್ನು ಇನ್ನೂ ಕಡ್ಡಾಯ ಮಾಡಿಲ್ಲ ಎಂದು ಹೇಳಿದರು.

ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುಧಾಕರ್ ಮನವಿ ಮಾಡಿದರು.

ಜನರು ತಮ್ಮ ಜವಾಬ್ದಾರಿ ಅರಿತು ತಾವಾಗಿಯೇ ನಿಯಮಗಳನ್ನು ಪಾಲಿಸುವುದರಿಂದ ಕೊರೊನಾ ಮಾರಿಯನ್ನ ತಡೆಯಬಹುದು ಎಂದು ತಿಳಿಸಿದರು.

ಕೊವಿಡ್ ಎರಡು ಡೋಸ್ ಪಡೆದಿರುವವರು ಕೂಡಲೆ ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆಯೂ ಸಚಿವರು ಕೋರಿದರು.