ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕೈದು ತಿಂಗಳು ಬಾಕಿ ಇದ್ದರೂ ಸಚಿವ ಸಂಪುಟ ವಿಸ್ತರಣೆಯ ವಿಶ್ವಾಸ ಹೊಂದಿದ್ದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.
ಸಚಿವ ಸಂಪುಟ ವಿಸ್ತರಣೆ ಸೇರಿ ಹಲವು ವಿಚಾರ ಚರ್ಚಿಸಲು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳಿದ್ದರು.
ಆದರೆ ಈ ವೇಳೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ನೀಡಿದಂತಿಲ್ಲ.
ಡಿಸೆಂಬರ್ 30ಕ್ಕೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು ಆಗ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಹಾಗಾಗಿ ಅಲ್ಲಿತನಕ ಸುಮ್ಮನಿರುವಂತೆ ಬೊಮ್ಮಾಯಿಗೆ ಸೂಚನೆ ನೀಡಿದ್ದು ಸಚಿವಾಕಾಂಕ್ಷಿಗಳಿಗೆ ಪುನಃ ನಿರಾಸೆ ಆಗಿದೆ.

