ಯಾವುದೇಜಿಲ್ಲೆಯನ್ನುಯಾರಿಗೂ ಜಹಗೀರ್ಕೊಟ್ಟಿಲ್ಲ: ಸಿ.ಟಿ.ರವಿ‌ಟಾಂಗ್

ಬೆಳಗಾವಿ: ಯಾವುದೇ ಜಿಲ್ಲೆಯನ್ನು ಯಾರಿಗೂ ಜಹಗೀರ್ ಕೊಟ್ಟಿಲ್ಲ.ಯಾವ ಜಿಲ್ಲೆಯೂ ಕೂಡ ಯಾರ ಅಪ್ಪನ ಆಸ್ತಿಯೂ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ಜಿಲ್ಲೆಯೂ ಯಾರ ವಂಶಪಾರಂಪರ್ಯ ಆಸ್ತಿ ಅಲ್ಲ ಎಂದು ತಿರುಗೇಟು ನೀಡಿದರು.

ಚುನಾವಣೆ ವೇಳೆ ಹಳೇ ಮೈಸೂರು ಭಾಗದಲ್ಲಿ ಫೋಕಸ್ ಮಾಡುತ್ತೇವೆ. ಶ್ರಮ  ಹಾಕಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಹಳೇ ಮೈಸೂರು ಭಾಗ ಕಬ್ಬಿಣದ ಕಡಲೇ ಅಲ್ಲ ಎಂದು ಎಚ್ ಡಿ ಕೆ ಗೆ ಟಾಂಗ್ ನೀಡಿದರು.

ಗುರುವಾರ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ ಒಳ್ಳೆಯ ಆಟಗಾರ ಯಾವ ಪಿಚ್ ಆದರೂ ಸರಿ ಚೆನ್ನಾಗಿ ಆಟವಾಡುತ್ತಾನೆ.

ಅಮಿತ್ ಶಾ ಅವರು ಒಳ್ಳೆಯ ಆಟಗಾರದೇಶದ ಯಾವುದೇ ಪಿಚ್ ಇರಲಿ ಚೆನ್ನಾಗಿ ಆಟ ಆಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.