ಮೈಸೂರು: ಕಳೆದ ಹನ್ನೊಂದು ದಿನಗಳಿಂದ ತಲೆ ಮರೆಸಿಕೊಂಡಿದ್ದ ಮಂಜುನಾಥ್ ಆಲಿಯಾಸ್ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂತೂ ಇಂತೂ ಕಡೆಗೂ ಸ್ಯಾಂಟ್ರೋ ರವಿ ಬಂಧನವಾಗಿದ್ದು ಮೊನ್ನೆಯೇ ಈತನ ಬಂಧನವಾಗಿತ್ತು ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ.
ಈತನ ಬಂಧನಕ್ಕೆ ಮೈಸೂರು ಪೊಲೀಸರು ಆರು ತಂಡಗಳನ್ನು ರಚಿಸಿದ್ದರು.
ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆ ಮರೆಸಿಕೊಂಡಿದ್ದ ಈತನ ಹೆಡೆಮುರಿ ಕಟ್ಟಲಾಗಿದ್ದು ಪೊಲೀಸರು ಮೈಸೂರಿಗೆ ಕರೆತರುತ್ತಿದ್ದಾರೆ.
ಸ್ಯಾಂಟ್ರೋ ರವಿಯ ಎರಡನೆ ಪತ್ನಿ ಕೊಟ್ಟ ದೂರು ಆದರಿಸಿ ಹತ್ತು ದಿನಗಳ ಹಿಂದೆ ದೂರು ದಾಖಲಾಗಿತ್ತು.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಜನವರಿ 2ರಂದು ಸ್ಯಾಂಟ್ರೋ ರವಿಯ ವಿರುದ್ಧ ದೂರು ದಾಖಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ಆತ ಎಸ್ಕೇಪ್ ಆಗಿದ್ದ. ಆತನ ಬಂಧನಕ್ಕೆ ಕೆಲ ರಾಜಕೀಯ ಪಕ್ಷಗಳೂ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಇದೇ ಬುಧವಾರ ರಾಮನಗರದಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ ಎಂಬ ಪುಕಾರು ಹಬ್ಬಿತ್ತು.
ಆತನೊಂದಿಗೆ ಕೆಲವು ರಾಜಕೀಯ ವ್ಯಕ್ತಿಗಳಿಗೂ ನಂಟಿದೆ.ಮಂಜುನಾಥ್ ವರ್ಗಾವಣೆ ದಂಧೆಯಲ್ಲೂ ತೊಡಗಿದ್ದ,
ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದೆಲ್ಲಾ ಆರೋಪಗಳಿವೆ.
ಒಟ್ಟು ಈಗ ಆತನ ಬಂಧನವಾಗಿದೆ. ವಿಚಾರಣೆ ವೇಳೆ ಎಲ್ಲಾ ಆರೋಪ ಸಾಬೀತಾಗಬೇಕಿದೆ, ಜನರಿಗೆ ಸತ್ಯ ಗೊತ್ತಾಗಬೇಕಿದೆ.

