ಕಾಂಗ್ರೆಸ್, ಬಿಜೆಪಿಗೂ ಮೊದಲು ಜೆಡಿಎಸ್ ಎರಡನೆ ಪಟ್ಟಿ ಬಿಡುಗಡೆ -ಎಚ್ ಡಿ ಕೆ

ರಾಯಚೂರು: ಕಾಂಗ್ರೆಸ್, ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೂ ಮುನ್ನ ಜೆಡಿಎಸ್ ನ ಎರಡನೇ ಪಟ್ಟಿ‌ ಬಿಡುಗಡೆಯಾಗುತ್ತದೆ ಎಂದು ಮಾಜಿ ಮುಖ್ಯ ಮಂತ್ರಿ ‌ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ರಾಯಚೂರು ನಗರ ಕ್ಷೇತ್ರದ ಮಿಟ್ಟಮಲ್ಕಾಪುರ ಗ್ರಾಮದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಜೆಡಿಎಸ್ ಪಟ್ಟಿ ತಡವಾಗುತ್ತದೆ ಎಂದು ವರದಿ ಇತ್ತು ಆದರೆ ನಮ್ಮ ಪಕ್ಷದ ಪಟ್ಟಿ ಮೊದಲು ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಹಾಸನದಲ್ಲಿ ಯಾವುದೇ ಭಿನ್ನಮತ ಇಲ್ಲ,ಅಷ್ಟೇ ಅಲ್ಲಾ ಬೇರೆ ಯಾವುದೇ ಜಿಲ್ಲೆಗಳಲ್ಲೂ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಇಲ್ಲ ಎಂದು ಎಚ್ ಡಿ ಕೆ ಸ್ಪಷ್ಟಪಡಿಸಿದರು.

ಹಾಸನದಲ್ಲಿ ಜೆಡಿಎಸ್ ನ ಸಮರ್ಥ ಅಭ್ಯರ್ಥಿ ಇರುವುದರಿಂದ ನಮ್ಮ ಕುಟುಂಬದಿಂದ ಯಾರೂ ನಿಲ್ಲುವ ಪ್ರಮೇಯ ಬರುವುದಿಲ್ಲ ಎಂದು ತಿಳಿಸಿದರು.