ಬೆಂಗಳೂರು: ಮೈಸೂರು ಶಾಸಕ ಸಾ.ರಾ.ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ರಾಜಿ ಸಂಧಾನ ಇದೀಗ ಮತ್ತೊಂದು ಮಜಲು ಮುಟ್ಟಿದೆ.

ಇದಕ್ಕೆ ಈಗ ಮೇಜರ್ ಟ್ವಿಸ್ಟ್ ಸಿಕ್ಕಿದೆ, ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪ ನಡುವೆ ಫೈಟ್ ಪ್ರಾರಂಭವಾಗಿದೆ.
ಸಾ.ರಾ.ಮಹೇಶ್ ಜೊತೆ ರಾಜಿ ಸಂಧಾನ ಮಾಡಿಕೊಂಡ ರೋಹಿಣಿ ಸಿಂಧೂರಿ ವಿರುದ್ಧ ರೂಪ ಸಿಡಿದೆದ್ದಿದ್ದಾರೆ.
ಒಬ್ಬ ಅಧಿಕಾರಿಯಾಗಿ ರಾಜಕಾರಣಿ ಜೊತೆ ರಾಜಿ ಸಂಧಾನಕ್ಕೆ ಹೋಗಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದುವರೆಗೆ ಶಾಸಕ ಸಾ.ರಾ.ಮಹೇಶ್ ಹಾಗೂ ರೋಹಿಣಿ ಸಿಂಧೂರಿ ನಡುವೆ ನಡೆಯುತ್ತಿದ್ದ ವಾದ,ವಿವಾದ ರಾಜಿ ಸಂಧಾನದ ಮೂಲಕ ಕೊನೆಯಾಗಿದೆ.
ಆದರೆ ಇದೀಗ ಅದು ಬೇರೆ ತಿರುವು ಪಡೆದಿದೆ. ಇಬ್ಬರ ನಡುವಿನ ರಾಜಿ ಪಂಚಾಯ್ತಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪ ನಡುವೆ ಫೈಟ್ ಗೆ ಕಾರಣವಾಗಿದೆ.
ಒಬ್ಬ ಅಧಿಕಾರಿಯಾಗಿ ರಾಜಕಾರಣಿ ಜೊತೆ ರಾಜಿ ಸಂಧಾನಕ್ಕೆ ಹೋದ ರೋಹಿಣಿ ಸಿಂಧೂರಿ ವಿರುದ್ಧ ರೂಪ ಕಿಡಿ ಕಾರಿದ್ದಾರೆ.
ಈ ಬಗ್ಗೆ ರೂಪ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಪ್ರಶ್ನೆಗಳ ವಾಗ್ಝರಿ ಹರಿಸಿದ್ದಾರೆ.
ರೋಹಿಣಿ ವಿರುದ್ದ ರೂಪ ಹತ್ತೊಂಬತ್ತು ಆರೋಪಗಳನ್ನು ಹೊರಿಸಿದ್ದಾರೆ.
ಒಬ್ಬ ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನಕ್ಕೆ ಹೋಗಿದ್ದು ಯಾಕೆ, ಮಂಡ್ಯ ಸಿಇಒ ಆದಾಗ ಟಾಯ್ಲೆಟ್ ಕಟ್ಟಿಸಿದ್ದಕ್ಕಿಂತ ಫಿಗರ್ ಫ್ಲಡ್ಜ್ ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿದ್ದರ ಮಹತ್ವವೇನು, ಚಾಮರಾಜನಗರ 24 ಜನ ಆಕ್ಸಿಜನ್ ನಿಂದ ಸತ್ತಾಗ ತನಿಖೆ ನಡೆಸದೆ ಈಕೆ ಹೇಗೆ ಪಾರಾದರು ಎಂದು ರೂಪ ಪ್ರಶ್ನಿಸಿದ್ದಾರೆ.
ಕನ್ನಡದ ಹುಡುಗಿ ಐಎಎಸ್ ಶಿಲ್ಪನಾಗ್ ವಿರುದ್ಧ ಜಗಳ, ರಂಪ ಮಾಡಿದಿರಿ.
ಸಾ.ರಾ ಮಹೇಶ್ ಮೇಲೆ ಅನೇಕ ಆರೋಪ ಮಾಡಿದಿರಿ ಒಂದನ್ನೂ ಪ್ರೂವ್ ಮಾಡಲಿಲ್ಲ. ಈ ಕಾರಣಕ್ಕೆ ಸಂಧಾನಕ್ಕೆ ಹೋದರಾ.
ಹಾಸನ ಡಿಸಿ ಸ್ಥಾನ ದಿಂದ ಎತ್ತಂಗಡಿ ಮಾಡಿದಾಗ ಸರ್ಕಾರದ ವಿರುದ್ಧ ಸಿಎಟಿಗೆ ಅರ್ಜಿ ಹಾಕಿದ್ದು, ಮೈಸೂರು ಡಿಸಿಯಾಗಿ ಹೋಗಿದ್ದ ಕನ್ನಡದ ಹುಡುಗ ಶರತ್ ನನ್ನು 29 ದಿನದಲ್ಲಿ ಎತ್ತಂಗಡಿ ಮಾಡಿಸಿದ್ದು,
ಕೋವಿಡ್ ನಿಂದ ಜನ ಸಾಯ್ತಾ ಇದ್ದರೆ ಮಾನವೀಯತೆ ಇಲ್ಲದೆ ಗೌರ್ನಮೆಂಟ್ ಹೌಸ್ ನಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು ಇದೆಲ್ಲಾ ಸರಿಯೇ ಎಂದು ರೂಪ ಅವರು ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ.
ಇಷ್ಟೆ ಅಲ್ಲದೆ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣದ ಸಿಬಿಐ ರಿಪೋರ್ಟ್ ಬಗ್ಗೆ ಕೂಡ ಪ್ರಶ್ನೆ ಮಾಡಿರುವ ರೂಪ, ರೋಹಿಣಿ ಸಿಂಧೂರಿಗೆ ಖಡಕ್ ಪ್ರಶ್ನೆ ಕೇಳಿದ್ದಾರೆ.
ಇದು ಇನ್ನೆಲ್ಲಿಗೆ ಹೋಗಿ ಮುಟ್ಟಲಿದೆಯೋ ಕಾದು ನೋಡಬೇಕಿದೆ.

