ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ – ಐಪಿಎಸ್ ಅಧಿಕಾರಿ ರೂಪ ನಡುವಿನ ಕದನದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಇಬ್ಬರು ಅಧಿಕಾರಿಗಳು ಸಾರ್ವಜನಿಕವಾಗಿ ಕಿತ್ತಾಡುತ್ತಿರುವುದರಿಂದ ಸರ್ಕಾರಕ್ಕೆ ಮುಜುಗರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಬ್ಬರನ್ನು ಕರೆಸಿ ಪ್ರಕರಣ ಸಂಬಂಧ ಮಾಹಿತಿ ಪಡೆಯುವಂತೆ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ವಂದನಾ ಶರ್ಮಾ ಅವರಿಗೆ ಸೂಚಿಸಿದ್ದಾರೆ .
ಕೂಡಲೆ ಇಬ್ಬರು ಅಧಿಕಾರಿಗಳಿಗೂ ನೋಟಿಸ್ ಕೊಡಿ. ತರುವಾಯ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿ, ಇಲ್ಲವೇ ಇಬ್ಬರನ್ನೂ ಪ್ರತ್ಯೇಕವಾಗಿ ಕರೆಸಿ ಸ್ಪಷ್ಟನೆ ತೆಗೆದುಕೊಳ್ಳಿ ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ.
ಜನರಿಗೆ ಒಳಿತು ಮಾಡಬೇಕಾದ ಐಎಎಸ್, ಐಪಿಎಸ್ ಅಧಿಕಾರಿಗಳೇ ಹೀಗೆ ಕಿತ್ತಾಡುವುದರಿಂದ ಇತರೆ ಅಧಿಕಾರಿಗಳಿಗೂ ಅಪಮಾನ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡಿಜಿ ಹಾಗೂ ಸಿಎಸ್ ಜೊತೆಗೂ ಮಾತಾಡಿದ್ದೇನೆ ವ್ಯೆಯಕ್ತಿವಾಗಿ ಮಾತಾಡುತ್ತಿ ದ್ದಾರೆ,ಕಾನೂನು ಚೌಕಟ್ಟಿನೊಳಗೆ ಏನು ಕ್ರಮ ತಗೊಬೇಕೋ ಅದನ್ನು ಸಿಎಂ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ
ಅರಗ ಜ್ಞಾನೇಂದ್ರ ಕೂಡಾ ಗರಂ ಆಗಿಯೇ ಹೇಳಿದ್ದಾರೆ.
ಇಂತಹ ಅಧಿಕಾರಿಗಳ ವರ್ತನೆಯನ್ನು ಸಹಿಸಲು ಸಾಧ್ಯ ಇಲ್ಲ. ವ್ಯೆಯಕ್ತಿಕ ಕಾರಣದಿಂದ ಬೀದಿ ರಂಪ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸಿಂಧೂರಿ ಇತಿಹಾಸವನ್ನು ಕೆದಕಿದ ರೂಪಾ ವಿರುದ್ದ ಸರ್ಕರದ ಮುಖ್ಯ ಕಾರ್ಯದರ್ಶಿಗೆ ರೋಹಿಣಿ ಸಿಂಧೂರಿ ದೂರು ನೀಡಿದ್ದಾರೆ.
ನನ್ನ ವೈಯಕ್ತಿಕ ಪೋಟೋ ಹರಿಬಿಟ್ಟಿದ್ದಾರೆ. ಇದರಿಂದ ನನ್ನ ಖಾಸಗಿ ಜೀವನಕ್ಕೆ ತೊಂದರೆ ಆಗಿದೆ. ಕೂಡಲೆ ರೂಪಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರೋಹಿಣಿ ಮನವಿ ಮಾಡಿದ್ದಾರೆ.
ಈ ಅಧಿಕಾರಿಗಳಿಬ್ಬರ ಜಗಳದ ಬಗ್ಗೆ ಡಿ.ಕೆ. ರವಿ ಪತ್ನಿ ಕುಸುಮಾ ಕೂಡ ಪ್ರತಿಕ್ರಿಯೆ ನೀಡಿದ್ದು,ನನಗೆ ಆದ ನೋವು ಬೇರೆ ಯಾರಿಗೂ ಆಗದಿರಲಿ, ಸಿಬಿಐ ರಿಪೋರ್ಟ್ನಲ್ಲಿ ಏನಿತ್ತು, ಅದು ಎಲ್ಲರಿಗೂ ತಿಳಿಯಲಿ ಎಂದು ಹೇಳಿದ್ದಾರೆ.

