ಮೈಸೂರು: ಬಿಜೆಪಿ ವಿಶ್ವಾಸ ದ್ರೋಹಿ ಪಾರ್ಟಿ ಎಂಬುದು ಸುಪ್ರಿಂ ಕೋರ್ಟ್ ತೀರ್ಪಿನಿಂದ ಗೊತ್ತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಬುಧವಾರ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿಮ್ಮ ವಿಶ್ವಾಸ ದ್ರೋಹಕ್ಕೆ ಕಾಂಗ್ರೇಸ್ ಸರ್ಕಾರ ಅಧಿಕಾರ ನಡೆಸಲಿದೆ ಎಂದು ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ತಿಳಿಸಿದರು.
ಚುನಾವಣಾ ವೇಳೆ ಜೇನುಗೂಡಿಗೆ ಕೈ ಹಾಕಿ ರಾಜ್ಯದ ಜನತೆಗೆ ಮೋಸ ಮಾಡಿ, ತಲೆ ಮೇಲೆ ತುಪ್ಪ ಇಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೋಸ ಮಾಡಿಕೊಂಡು ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದೀರಲ್ಲಾ ನಿಮಗೆ ಬದ್ದತೆ ಇದಿಯಾ, ಎಂದು ಡಿಕೆಶಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಲಿಂಗಾಯಿತರು, ಒಕ್ಕಲಿಗರು ಭಿಕ್ಷುಕರಾ ಎಂದ ಡಿಕೆಶಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೇಳಿದ್ದಾರೆ. ಆದರೆ ನೀವು ಮೈನಾರಿಟಿಸ್ ರಿಸರ್ವೇಶನ್ ಕಿತ್ತು ಹಂಚಿದ್ದೀರಿ ಎಂದು ಕಿಡಿಕಾರಿದರು.
ಡಬಲ್ ಇಂಜಿನ್ ಸರ್ಕಾರ ಕೆಟ್ಟೋಗಿದೆ,ಡ್ಯಾಂ ಒಡೆದು ಹೋಗಿದೆ, ಬಿಜೆಪಿ ೪೦% ಕಮೀಷನ್ ಪಡೆದಂತೆ ಚುನಾವಣೆಯಲ್ಲಿ ೪೦ ಸೀಟುಗಳನ್ನ ಗೆಲ್ಲಲಿದೆ. ಕಾಂಗ್ರೆಸ್ 150 ಸೀಟ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

