ಹುಬ್ಬಳ್ಳಿ: ಕಾಂಗ್ರೆಸ್ ನವರು ಹತಾಶರಾಗಿದ್ದಾರೆ ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ, ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ ಎಂದು ಸಿಎಮ್ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಹುಬ್ಬಳ್ಳಿಯ ಆದರ್ಶ ನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇನ್ನೂ ಅಧಿಕಾರದ ಮದದಲ್ಲಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಜನರನ್ನು ಗುಲಾಮರು,ವೋಟ್ ಬ್ಯಾಂಕ್ ಅಂತಾ ತಿಳಿದುಕೊಂಡು ಏನು ಬೇಕಾದರೂ ಮಾತಾಡಿದ್ರೆ ನಡೆಯತ್ತೆ ಅನ್ನೋ ಅಮಲಿನಲ್ಲಿ ಇದ್ದಾರೆ,ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಎಲ್ಲಕಿಂತ ನೋವಾಗಿರೋದು ಸಿದ್ದರಾಮಯ್ಯ ಖರ್ಗೆ ಮಾತಾಡಿರುವುದು, ಸಿದ್ದರಾಮಯ್ಯ ಖರ್ಗೆ 50 ವರ್ಷ ಸಾರ್ವಜನಿಕ ಜೀವನ ಕಳೆದಿದ್ದಾರೆ, ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆದುಕೊಂಡರೆ ಶೋಭೆ ತರತ್ತದೆ ಎಂದು ಟೀಕಿಸಿದರು.
ಮೋದಿ ಅವರನ್ನು ಕಾಂಗ್ರೆಸ್ ನಾಯಕರು ಯಾವಾಗ ಬೈದ್ರು ಅವಾಗ ಮೋದಿ ವೋಟ್ ಜಾಸ್ತಿ ಆಗಿವೆ ಎಂದು ತಿಳಿಸಿದರು.
ಇದೀಗ ವಿಷ ಸರ್ಪ ಎಂದು ಹೇಳಿ ಜನರ ಭಾವನೆ ಕೆರಳುಸತ್ತಿದ್ದಾರೆ.ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಿದ್ದರಾಮಯ್ಯ ಅವರ ವೋಟ್ ಬ್ಯಾಂಕ್ ಛಿದ್ರ ಆಗಿದೆಹಾಗಾಗಿ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ,SC ST OBC ವೋಟ್ ಅವರ ಕೈ ತಪ್ಪಿ ಅವರ ಡ್ಯಾಂ ಒಡೆದಿದೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಇದೀಗ ಡಿಕೆ ಶಿವಕುಮಾರ್ ಗೆ ಪೈಪೋಟಿ ಕೊಡುತ್ತಿದ್ದಾರೆ ಆ ಮಟ್ಟಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ.
ಸಿದ್ದರಾಮಯ್ಯ ಮೇಲೆ 8 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಇದೆ,ಅದಕ್ಕೆ ಉತ್ತರ ಕೊಡಬೇಕಾಗತ್ತದೆ ಎಂದು ಹೀಗೆ ಮಾತನಾಡುತ್ತಿದ್ದಾರೆ ಎಂದು ಸಿಎಂ ತಿರುಗೇಟು ನೀಡಿದರು.

