ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ದಾಖಲೆಯನ್ನೇ ಬರೆದಿದೆ.
ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಮೂರನೇ ಬಾರಿ ಪ್ರಧಾನಿ ಮೋದಿ ಬಂದಿದ್ದು ವಿಶೇಷ.
ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿತು. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ರೋಡ್ ಶೊ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ತೆರೆದ ವಾಹನದಲ್ಲಿ ಮೋದಿ ಸಾಗುತ್ತಾ ಸಹಸ್ರಾರು ಜನರತ್ತ ಕೈಬೀಸುತ್ತಾ ಕೈ ಮುಗಿಯುತ್ತಾ ಸಾಗಿದರು.
ಮೋದಿ ರೇಷ್ಮೆಯ ಕೇಸರಿ ಬಣ್ಣದ ಮೈಸೂರು ಪೇಟಾದಲ್ಲಿ ಕಂಗೊಳಿಸುತ್ತಿದ್ದರು. ಸಂಸದರಾದ ತೇಜಸ್ವಿ ಸೂರ್ಯ,
ಪಿ.ಸಿ ಮೋಹನ್, ಸಾಥ್ ನೀಡಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಮೋದಿ ರೋಡ್ ಶೊ ಯಶಸ್ವಿಯಾಗಲು ಕಾರಣರಾದ ಬೆಂಗಳೂರು ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟವು. ಬಿಜೆಪಿ ಕಾರ್ಯಕರ್ತರು ಮೋದಿಯವರ ಮೇಲೆ ಹೂಮಳೆ ಸುರಿಸಿ ಸಂಭ್ರಮಿಸಿದರು.
ಎಲ್ಲೆಲ್ಲೂ ಮೋದಿ, ಮೋದಿ ಎಂಬ ಜೈಕಾರ ಘೋಷಣೆ ಕಳಿ ಬಂದಿತು.ಜನಸಾಗರವೇ ಹರಿದು ಬಂದಿತ್ತು.
ಮೋದಿಯನ್ನು ನೋಡಲು ವೃದ್ಧರು, ಚಿಕ್ಕ ಮಕ್ಕಳು.ಅದರಲ್ಲೂ ಹೆಚ್ಚಿನ ಯುವತಿಯರು ಸೇರಿದ್ದು ವಿಶೇಷ.

