ಜೆಡಿಎಸ್ ವಿಸರ್ಜಿಸುವರೆ ಎಚ್ ಡಿ ಕೆ ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಾವು ಹೇಳಿದಂತೆ ನಡೆದುಕೊಳ್ಳುವರೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ಜೆಡಿಎಸ್ ಪಕ್ಷ 120 ಸೀಟು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು.

ಒಂದು ವೇಳೆ ತಮ್ಮ ಪಕ್ಷಕ್ಕೆ 120 ಸೀಟು ಬಾರದೆ ಹೋದಲ್ಲಿ ಪಕ್ಷವನ್ನೇ ವಿಸರ್ಜಿಸುವುದಾಗಿ ಪಂಚರತ್ನ ಯಾತ್ರೆ ವೇಳೆ ಅವರು ಘೋಷಿಸಿದ್ದರು.

ಈಗ ಜೆಡಿಎಸ್ ಗೆ 120 ಇರಲಿ 30 ಸೀಟುಗಳನ್ನೂ ತಲುಪಲಾಗಿಲ್ಲ. ಹಾಗಾಗಿ ಅವರು ಪಕ್ಷವನ್ನು ವಿಸರ್ಜಿಸಿಯಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ಅವರೇ ಮುಂದೆ ಉತ್ತರ ನೀಡಬೇಕಿದೆ.