ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾರೀ ಬಹುಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಡಿಕೆಶಿಗೆ ಸೆಡ್ಡು ಹೊಡೆಯಲು ಕನಕಪುರದಲ್ಲಿ ಬಿಜೆಪಿ ಹೈಕಮಾಂಡ್ ಸ್ಪರ್ಧಿಸಲು ಸೂಚಿಸಿತ್ತು.
ಕನಕಪುರದ ಬಂಡೆ ಎಂದೇ ಖ್ಯಾತಿಯಾಗಿರುವ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ ಯಾರ ಆಟವೂ ನಡೆಯುವುದಿಲ್ಲ ಗೆಲುವು ನನ್ನದೇ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದರು.
ಅದು ನಿಜ ಆಗಿದೆ. ಡಿ.ಕೆ ಶಿವಕುಮಾರ್ ಅವರು ಆರ್ ಅಶೋಕ್ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಭಾರೀ ಜಯ ಸಾಧಿಸಿದ್ದು ಅಶೋಕ್ ಗೆ ತೀವ್ರ ಮುಖ ಭಂಗ ಆಗಿದೆ.
ಆರ್ ಅಶೋಕ್ ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದು ಕನಕಪುರ ಮತ್ತು ಪದ್ಮನಾಭನಗರ ಎರಡರಲ್ಲೂ ಗೆಲುವು ಸಾಧಿಸುತ್ತೇನೆ ಎಂದು ಹೇಳಿಕೊಂಡಿದ್ದರು ಆದರೆ ಕನಕಪುರದಲ್ಲಿ ಅವರಿಗೆ ಹೀನಾಯ ಸೋಲು ಉಂಟಾಗಿದೆ.
ಪದ್ಮನಾಭ ನಗರದಲ್ಲಿ ಅಶೋಕ್ ಮುನ್ನಡೆ ಕಾದುಕೊಂಡಿದ್ದಾರೆ.

