ಡಿ.ಕೆ ಶಿ ಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಸಹೋದರ ಬೇಸರ

ನವದೆಹಲಿ: ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಸಹೋದರ ಹಾಗೂ ಸಂಸದ ಡಿ.ಕೆ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ನನ್ನ ಅಣ್ಣಡಿ.ಕೆ ಶಿವಕುಮಾರ್ ಡಿಸಿಎಂ ಆಗುವುದು ನನಗೆ ಖುಷಿ ತಂದಿಲ್ಲ ಎಂದು ಬೇಸರದಲ್ಲೇ ಹೇಳಿದರು.

ಜನರ ಹಿತದೃಷ್ಠಿಯಿಂದ ನಮ್ಮ ವಾಗ್ದಾನ ಈಡೇರಬೇಕಿದೆ. ಕರ್ನಾಟಕದ ಹಿತದೃಷ್ಠಿಯಿಂದ ಡಿ.ಕೆ ಶಿವಕುಮಾರ್ ಒಪ್ಪಿದ್ದಾರೆ.

ನಾವು ನೀಡಿರುವ ಭರವಸೆಗಳನ್ನ ಮೊದಲು ಈಡೇರಿಸಬೇಕು ಅದಕ್ಕಾಗಿ  ಒಪ್ಪಿಕೊಳ್ಳಬೇಕಾಯಿತು. ಭವಿಷ್ಯದಲ್ಲಿ ಏನಾಗುತ್ತೆ ಎಂಬುದನ್ನ ನೋಡುತ್ತೇವೆ.  ಕಾದು ನೋಡೋಣ ಎಂದು ಹೇಳಿದರು.