ಚಿಗುರು ಕವಿ ಗೋಷ್ಠಿ ಅರ್ಥಪೂರ್ಣವಾದ ಕಾರ್ಯಕ್ರಮ : ಪ. ಗು. ಸಿದ್ದಪುರ

ಮೈಸೂರು: ನಮ್ಮ ಸಂಪತ್ತು ನಮ್ಮ ಮಕ್ಕಳು, ಮಕ್ಕಳಿದ್ದರೆ ಶಾಲೆ, ಮಕ್ಕಳಿದ್ದರೆ ಮನೆ, ಚಿಗುರು ಕವಿ ಘೋಷ್ಠಿ ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಖ್ಯಾತ ಮಕ್ಕಳ ಸಾಹಿತಿ ಪ.ಗು. ಸಿದ್ದಪುರ ಅವರು ತಿಳಿಸಿದರು.

ಮೈಸೂರು ದಸರಾ ಪ್ರಯುಕ್ತ ನಗರದ ಮಾನಸ ಗಂಗೋತ್ರಿಯಲ್ಲಿನ ಶ್ರೀಮತಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸಾಹಿತ್ಯವು ಪರಿಪೂರ್ಣವಾದುದು. ಮಕ್ಕಳ ಸಾಹಿತ್ಯದಲ್ಲಿ ಹಲವಾರು ಪ್ರಾಕಾರಗಳಿವೆ. ಸಾಹಿತ್ಯದ ಸಂಸ್ಕಾರವು ಮನೆಯಿಂದಲೇ ಶುರುವಾಗುತ್ತದೆ.

ಶಿಶು ಪ್ರಾಸವನ್ನು ಕೇಳಿ ಮಕ್ಕಳು ದೊಡ್ಡವರಾಗುತ್ತಾರೆ. ಮಕ್ಕಳ ಸಾಹಿತ್ಯವನ್ನು ಬರೆಯಲು ವಯಸ್ಸು ಮುಖ್ಯವಲ್ಲ ಅದನ್ನು ಬರೆಯುವಾಗ ಪರಕಾಯ ಪ್ರವೇಶ ಮಾಡಿ ನಾವು ನಮ್ಮ ಬಾಲ್ಯ ನೆನಪಿಸಿಕೊಂಡು ಭಾವನಾತ್ಮಕವಾಗಿ ಮಕ್ಕಳ ಸಾಹಿತ್ಯವನ್ನು  ಬರೆಯುತ್ತೇವೆ ಎಂದು ಹೇಳಿದರು.

ಪ್ರೌಢ ಸಾಹಿತ್ಯಕ್ಕಿಂತ ದೊಡ್ಡದು ಈ ಮಕ್ಕಳ ಸಾಹಿತ್ಯ, ಮಕ್ಕಳಿಗೂ ಸಾಹಿತ್ಯ ಬೇಕು ನಾಳೆ ಮಕ್ಕಳು ಒಳ್ಳೆಯ ಪ್ರಜೆಗಳಾಗಬೇಕೆಂದರೆ ಮಕ್ಕಳ ಸಾಹಿತ್ಯವನ್ನು ಓದಬೇಕು ಎಂದು ಅವರು ತಿಳಿಸಿದರು.

ಮಕ್ಕಳ ಸಾಹಿತ್ಯವನ್ನು ಓದುವುದರಿಂದ ಮನಸ್ಸು ಹಗುರವಾಗುತ್ತದೆ,ಮಕ್ಕಳ ಸಾಹಿತ್ಯದ ವಾಚನವನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲುಸುತ್ತೇನೆ ಎಂದು ಪ. ಗು. ಸಿದ್ದಪುರ

ತಿಳಿಸಿದರು.ಕಾರ್ಯಕ್ರಮದಲ್ಲಿ ಚಿಗುರು ಕವಿಗೋಷ್ಠಿಯ ಕಾರ್ಯಧ್ಯಕ್ಷರಾದ ಡಾ.ಎಸ್.ವಿಜಯ್ ಕುಮಾರಿ ಕರಿಕಲ್, ಖ್ಯಾತ ಕವಯತ್ರಿ ಡಾ.ಏನ್.ಕೆ ಲೋಲಾಕ್ಷಿ, ಚಿಗುರು ಕವಿಗೋಷ್ಠಿ ಉಪಸಮಿತಿಯ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮತ್ತು ಉಪಸಮಿತಿಯ ಅಧ್ಯಕ್ಷ ಮಹೇಶ್ ಅಂಬಲಾರೆ ಹಾಗೂ ಉಪಾಧ್ಯಕ್ಷರುಗಳಾದ ದಂಡಿನ ಕೆರೆ ನಾಗರಾಜು, ರವಿಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು.