ಮೈಸೂರು: ರಾಜ ಮಹಾರಾಜರ ಕಾಲದಿಂದಲೂ ವಿಜಯದಶಮಿ ದಿನ ನಡೆಯುವ ಜಟ್ಟಿಕಾಳದ ಸುಪ್ರಸಿದ್ಧವಾಗಿದೆ.
ಜೆಟಿ ಕಾಳಗವನ್ನು ಒಡೆಯರ್ ಕಾಲದಿಂದಲೂ ಮುಂದುವರೆಸಿಕೊಂಡು ಬರಲಾಗಿದೆ ಸಾಂಪ್ರದಾಯಿಕವಾಗಿಯು ನಡೆದು ಬಂದಿದೆ.ಈಗಲೂ ಮುಂದುವರಿದಿದೆ.
ಅಖಾಡದಲ್ಲಿ ಯಾವುದೇ ಜಟ್ಟಿಯ ಮೈನಿಂದ ಒಂದು ತೊಟ್ಟು ರಕ್ತ ಬೀಳಲೇ ಬೇಕಿದೆ.ರಕ್ತ ಬಿದ್ದರೇನೇ ಶುಭ ಎಂದು ನಂಬಲಾಗಿದೆ.
ಇಂದು ಜಟ್ಟಿ ಕಾಳಗ ಕಳೆಗಟ್ಟಿತ್ತು.ಬೆಂಗಳೂರಿನ ಪ್ರಮೋದ್ ಜೆಟ್ಟಿ ಚಾಮರಾಜನಗರದ ವೆಂಕಟೇಶ್ ಜೆಟ್ಟಿ ನಡುವೆ ಹಣಾಹಣಿ ನಡೆಯಿತು.
ಬೆಂಗಳೂರಿನ ಪ್ರಮೋದ್ ಜೆಟ್ಟಿ ಚಾಮರಾಜನಗರದ ವೆಂಕಟೇಶ್ ಜೆಟ್ಟಿಗೆ ಪ್ರಹಾರ ಮಾಡಿದರು.
ನಂತರ ಚನ್ನಪಟ್ಟಣದ ಪ್ರವೀಣ್ ಜೆಟ್ಟಿ ಹಾಗೂ ಮೈಸೂರು ಪ್ರದೀಪ್ ಜೆಟ್ಟಿ ನಡುವೆ ಜಟ್ಟಿ ಕಾಳಗ ನಡೆಯಿತು.
ಈ ವೇಳೆ ಪ್ರವೀಣ್ ಜೆಟ್ಟಿ ಮಾಡಿದ ಪ್ರಹಾರದಿಂದ ಪ್ರದೀಪ್ ಜೆಟ್ಟಿ ಅವರ ಮೈನಿಂದ ರಕ್ತ ಚಿಮ್ಮಿದ ಕೂಡಲೇ ಅಭಿಮಾನಿಗಳು ಹೋ ಎಂದು ಹರ್ಷೋದ್ಘಾರ ಮಾಡಿದರು.
ಒಟ್ಟಾರೆ ಸಾಂಪ್ರದಾಯಿಕ ಜಟ್ಟಿ ಕಾಳಗ ಮುಕ್ತಾಯವಾಯಿತು.

