ಬನ್ನೀ ಮರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನ ಸಂಪನ್ನಗೊಳಿಸಿದ‌ ಯದುವೀರ್

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಇಂದು ವಿಜಯದಶಮಿ ಪ್ರಯುಕ್ತ ಬನ್ನೀ ಮರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಯದುವೀರ್ ಅವರು ಬನ್ನೀ ಪೂಜೆಗೂ ಮುನ್ನ ಆರಮನೆ ಒಳಾಂಗಣದಲ್ಲಿ ನಡೆದ ಸಾಂಪ್ರದಾಯಿಕ ಜಟ್ಟಿ ಕಾಳಗ ವೀಕ್ಷಿಸಿದರು.

ಈ ವೇಳೆ ಪ್ರವೀಣ್ ಜೆಟ್ಟಿ ಮಾಡಿದ ಪ್ರಹಾರದಿಂದ ಪ್ರದೀಪ್ ಜೆಟ್ಟಿ ಅವರ‌ ಮೈನಿಂದ ರಕ್ತ‌ ಚಿಮ್ಮಿತು

ರಕ್ತ ಚುಮ್ಮಿದ ನಂತರ ಯದುವೀರ್ ಅವರು
ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ ಇಟ್ಟು ಪೂಜೆ ಸಲ್ಲಿಕೆ ಮಾಡಿದರು ತದನಂತರ ಆಯುದಗಳೊಂದಿಗೆ ಅರಮನೆ ಆವರಣದಲ್ಲಿರುವ‌‌ ಭುವನೇಶ್ವರಿ ದೇವಾಲಯಕ್ಕೆ ತೆರಳಿದರು.

ನಂತರ ಅಲ್ಲಿದ್ದ ಬನ್ನೀ ಮರಕ್ಕೆ ಪೂಜೆ ಸಲ್ಲಿಸಿ ಬನ್ನೀ ಕಡಿಯುವ ಮೂಲಕ ವಿಜಯದಶಮಿ ಪೂಜೆ ಸಂಪನ್ನಗೊಳಿಸಿದರು.