ಮೈಸೂರು: ಸಂಸತ್ ಒಳಗೆ ಸ್ಮೋಕ್ ಬಾಂಬ್ ಹಾಕಿದ ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶದವ ಮೈಸೂರಿಗೆ ಆಗಮಿಸಿದ್ದ ಎಂಬುದು ಗೊತ್ತಾಗಿದ್ದು
ಪ್ರಮುಖ ಆರೋಪಿ ಸಾಗರ್ ಶರ್ಮಾ ಮೇ ತಿಂಗಳಿನಲ್ಲಿ ಮೈಸೂರಿಗೆ ಆಗಮಿಸಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಉತ್ತರ ಪ್ರದೇಶ ಮೂಲದ ಸಾಗರ್ ಶರ್ಮಾ ಮೈಸೂರು ಭೇಟಿ ವೇಳೆ ಮತ್ತೊಬ್ಬ ಆರೋಪಿ ಮನೋರಂಜನ್ ಭೇಟಿಗೆ ಆಗಮಿಸಿದ್ದನಾ ಅಥವಾ ಬೇರೆ ಕಾರಣಕ್ಕೆ ಆಗಮಿಸಿದ್ದನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಗರ್ ಶರ್ಮಾ ಮೈಸೂರು ಭೇಟಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಮೈಸೂರು ಪೊಲೀಸರು ಅವನು ಮೈಸೂರಿಗೆ ಬಂದಾಗ ಯಾರು,ಯಾರನ್ನು ಭೇಟಿ ಮಾಡಿದ್ದ ಯಾವ ಸ್ಥಳಗಳಿಗೆ ತೆರಳಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೆಲ್ಲಾ ನೋಡಿದರೆ ಈ ಆರೋಪಿಗಳೆಲ್ಲಾ ಸಂಸತ್ ಪ್ರವೇಶಿಸಿ ಕೋಲಾಹಲ ಸೃಷ್ಟಿಸಲು ಮೊದಲೇ ಸಂಚು ರೂಪಿಸಿದ್ದರೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

