ಕೇಂದ್ರ ಸರ್ಕಾರದ ನಡೆ ಪ್ರಜಾಸತ್ತಾತ್ಮಕ ತತ್ವಗಳ ಕೊಲೆ: ಕಾಂಗ್ರೆಸ್ ಆರೋಪ

ಬೆಂಗಳೂರು, ಡಿ.22: ಕೇಂದ್ರ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಮಾಡಿ, ಸಂಸತ್ತಿನ ಉಭಯ ಸದನಗಳಿಂದ 142 ಸಂಸದರನ್ನು ಅಮಾನತುಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ
ಕೆಪಿಸಿಸಿ ಅಧ್ಯಕ್ಷರೂ‌ ಹಾಗೂ ಉಪ ಮುಖ್ಯ ಮಂತ್ರಿ‌ಡಿ.ಕೆ.ಶಿವಕುಮಾರ್,ಮುಖಂಡರುಗಳಾದ ಹೆಚ್.ಎಂ.ರೇವಣ್ಣ,ಸಲೀಂ‌ ಅಹಮದ್,ಉಗ್ರಪ್ಪ ಮತ್ತಿತರರು ‌ನೇತೃತ್ವ ವಹಿಸಿದ್ದರು.

ಇದೊಂದು ಪ್ರಜಾಸತ್ತಾತ್ಮಕ ತತ್ವಗಳ ಕೊಲೆ, ಪ್ರಜಾಪ್ರಭುತ್ವದ ಮೇಲೆ ನಡೆಸಿದ ಭೀಕರ ದಾಳಿ ಎಂದು ಬಿಜೆಪಿ ‌ಸರ್ಕಾರದ ನಡೆ
ಯನ್ನು ಖಂಡಿಸಿದರು.

ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಗಳು,ಕೆಲ ಸಚಿವರು ಶಾಸಕರು, ಪಕ್ಷದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

ಕೈಲಾಗದವರು ಮೈಪರಚಿಕೊಂಡಂತಾಗಿದೆ ಬಿಜೆಪಿ ಪರಿಸ್ಥಿತಿ, ದಾಳಿ ಕೋರರ ಬಗ್ಗೆ ಮಾತಾಡಿದ್ರೆ ಮಾಡ್ತಾರೆ ಅಮಾನತು; ದಾಳಿಗೆ ನೆರವಾಗಿದ್ದೋರು ಸೇಫ್- ಕುರುಡು ಬಿಜೆಪಿ, ದಾಳಿ ಕೋರರಿಗೆ ಪಾಸ್ ಪೇಪರ್ ಸಿಂಹ ಅರ್ಹ: ದಾಳಿ ಪ್ರಶ್ನೆ ಮಾಡಿದ ಸಂಸದರು ಅನರ್ಹ, ನ್ಯಾಯ ಕೇಳಿದ ಸಂಸದರಿಗೆ ಹಿಟ್ಲರ್ ಬಿಜೆಪಿ ಸರ್ಕಾರದಿಂದ ಅನ್ಯಾಯ, ಸಂವಿಧಾನ ವಿರೋಧಿ ಸರ್ವಾಧಿಕಾರಿ ನರೇಂದ್ರ ಮೋದಿ, ಇದೇ ಮೊದಲಾದ ಘೋಷಣೆಗಳಿದ್ದ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.