ಶಿವಮೊಗ್ಗ: ನಾವು ಕೂಡಾ ಶ್ರೀರಾಮಚಂದ್ರನ ಭಕ್ತರೇ. ಜನವರಿ 22ರ ನಂತರ ನಾನು ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
5ನೇ ಗ್ಯಾರಂಟಿ ಯುವನಿಧಿ ಚಾಲನೆ ನೀಡಲು ಶಿವಮೊಗ್ಗಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಏರ್ ಪೋರ್ಟ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾವು ಶ್ರೀರಾಮಚಂದ್ರನ ಭಕ್ತರು, ಶ್ರೀರಾಮನ ಪೂಜೆ ಮಾಡುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ. ಜನವರಿ 22ಕ್ಕೆ ಕಾಂಗ್ರೆಸ್ ಕಾರ್ಯಕರ್ತರು ನಾವು ಪೂಜೆ ಮಾಡುತ್ತೇವೆ ರಾಜ್ಯದ ಎಲ್ಲಾ ರಾಮಮಂದಿರಗಳಲ್ಲಿ ಕಾರ್ಯಕರ್ತರು ಪೂಜೆ ಮಾಡಲಿದ್ದಾರೆ ಎಂದು ಹೇಳಿದರು.ಆದರೆ ರಾಮಮಂದಿರ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ರಾಮಮಂದಿರ ಯಾವ ರೀತಿ ನಿರ್ಮಾಣ ಮಾಡಿದ್ದಾರೆ ಅಂತಾ ನೋಡುತ್ತೇನೆ. ಅಯೋಧ್ಯೆಗೆ ನಾನೂ ಹೋಗುತ್ತೇನೆ. ಜನವರಿ 22ರ ನಂತರ ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

