ಹಾವೇರಿ: ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು,ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಹಾವೇರಿ ಜಿಲ್ಲೆಯಲ್ಲಿಂದು ಆಯೋಜಿಸಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ
ಸಿದ್ದರಾಮಯ್ಯಅವರು ಹಾನಗಲ್ ಗ್ಯಾಂಗರೇಪ್ ಪ್ರಕರಣದ ಸಂತ್ರಸ್ತೆಯನ್ನೂ ಭೇಟಿ ಮಾಡಿ ಸಮಸ್ಯೆಗಳನ್ನ ಆಲಿಸಿ ಸಾಂತ್ವನ ಹೇಳಿದರು.
ಜತೆಗೆ ಪೊಲೀಸರಿಂದ ತನಿಖೆ ಬೆಳವಣಿಗೆ ಕುರಿತು ಮಾಹಿತಿ ಪಡೆದರು.
ನಂತರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಬಿಡುವುದಿಲ್ಲ. ಯಾವುದೇ ಧರ್ಮಕ್ಕೆ, ಜಾತಿಗೆ ಸೇರಿದವರಾಗಿದ್ದರೂ ಕ್ರಮ ಗ್ಯಾರಂಟಿ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಎಚ್ಚರಿಸಿದರು.
ಸಂತ್ರಸ್ಥೆ ಕುಟುಂಬಸ್ಥರು ಈಗಷ್ಟೇ ಮನವಿ ಕೊಟ್ಟಿದ್ದಾರೆ. ಈಗ ತನಿಖೆ ಮಾಡಿದವರೂ ಪೊಲೀಸರೇ ಎಸ್‌ಐಟಿಯವರೂ ಪೊಲೀಸರು, ಪ್ರಾಥಮಿಕ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಈ ಬಗ್ಗೆ ನಮ್ಮ ಶಾಸಕ ಶಿವಣ್ಣ ಅವರೊಂದಿಗೂ ಚರ್ಚಿಸಿದ್ದೇನೆ ಎಂದು ಹೇಳಿದರು.
ಅನಂತಕುಮಾರ್ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದು, ಅನಂತಕುಮಾರ್ ಇಷ್ಟು ದಿನ ನಾಪತ್ತೆಯಾಗಿದ್ದರು, ಅವರು ತಮ್ಮ ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರಾ, ಬಡವರ ಕಷ್ಟ ಕೇಳಿದ್ದಾರಾ, ಈಗ ಪ್ರಹ್ಲಾದ್ ಜೋಶಿಗೂ ಸಂಸ್ಕೃತಿ ಇಲ್ಲ ಅಂತ ಆಯಿತು ಎಂದು ತಿರುಗೇಟು ನೀಡಿದರು.

