ಮೈಸೂರು: ಒನ್ ನೇಷನ್ ಒನ್ ಎಲೆಕ್ಷನ್ ಜಾರಿಗೆ ತರುವುದರಿಂದ ಆಗುವ ಪ್ರಯೋಜನ ಕುರಿತು ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಒಂದು ವೇಳೆ ಅದು ಸಂವಿಧಾನಕ್ಕೆ ವಿರೋಧಿಯಾಗಿದ್ದರೆ ಅದನ್ನು ತರಬಾರದು,
ಸಂವಿಧಾನ ವಿರೋಧಿ ಕಾರ್ಯವನ್ನು ಯಾರು ಮಾಡಬಾರದು ಎಂದು ತಿಳಿಸಿದರು.
ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಮಾತನಾಡಿದರು.
ರಾಮ ಮಂದಿರ ನಿರ್ಮಾಣದಿಂದ ಬಿಜೆಪಿಗೆ ಲಾಭವಾಗಲಿದೆಯೆ ಎಂಬ ಪ್ರಶ್ನೆಗೆ, ಧರ್ಮದ ಹೆಸರಿನಲ್ಲಿ ರಾಜಕೀಯ ಸರಿಯಲ್ಲ, ಅಪೂರ್ಣವಾದ ಕಟ್ಟಡದಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಶ್ರೀರಾಮಚಂದ್ರ ತನ್ನ ಅವಧಿಯಲ್ಲಿ ಸರ್ವ ಜನಾಂಗದವರಿಗೂ ನ್ಯಾಯ ಒದಗಿಸಿದ್ದ ಅಂತಹ ಕಾರ್ಯವನ್ನು ಬಿಜೆಪಿ ಮಾಡಬೇಕಾಗಿದೆ,ಕೇವಲ ರಾಮಮಂದಿರ ನಿರ್ಮಾಣದಿಂದ ಬಿಜೆಪಿಗೆ ಮತ ಬರುತ್ತದೆ ಎಂದು ಹೇಳಲಾಗದು ಎಂದರು ಸಿಎಂ.
ನಿಗಮ ಮಂಡಳಿಗಳಿಗೆ ಪಟ್ಟಿ ಸಿದ್ಧವಾಗಿದೆ ಹೈಕಮಾಂಡ್ ಒಪ್ಪಿಗೆ ಕೊಟ್ಟ ತಕ್ಷಣ ಅದನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಸ್ಸಾಂನಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ನಾನು ಖಂಡಿಸುತ್ತೇನೆ. ಈ ರೀತಿ ಮಾಡುವುದರ ಮೂಲಕ ಯಾತ್ರೆಯನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಎಫ್ಐಆರ್ ಗಳಿಗೆ ರಾಹುಲ್ ಗಾಂಧಿಯವರು ಹೆದರುವುದಿಲ್ಲ ಎಂದು ಸಿದ್ದು ಹೇಳಿದರು.
ಸಂವಿಧಾನ ಜಾಗೃತಿ ಜಾಥಾವನ್ನು ಜ. 26 ರಿಂದ ಫೆ. 25ರ ವರೆಗೆ ರಾಜ್ಯದ್ಯಂತ ಆಚರಿಸಲಾಗುವುದೆಂದು ಸಿಎಂ ಸಿದ್ದರಾಮಯ್ಯ ಇದೇ ಹೇಳಿದರು.
ಸಂವಿಧಾನದ ಮೇಲೆ ವಿಚಾರ ಸಂಕೀರ್ಣ ಮತ್ತು ಸಂವಾದವನ್ನು ಇದೆ ಫೆಬ್ರವರಿ 24, 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದೆ,
ಸಂವಿಧಾನದ ಸಮಾವೇಶ ಫೆ. 25ರ ಸಂಜೆ ನಡೆಯಲಿದೆ ಎಂದು ಸಿಎಂ ತಿಳಿಸಿದರು.

