ಆಮ್ ಆದ್ಮಿ ಸರ್ಕಾರ ಕೆಡವಲು ಬಿಜೆಪಿ ಯತ್ನ:ದೆಹಲಿ‌ ಸಿಎಂ ಕೇಜ್ರಿವಾಲ್ ಗಂಭೀರ ಆರೋಪ

ನವದೆಹಲಿ: ದೆಹಲಿಯಲ್ಲಿ ನಮ್ಮ ಆಮ್ ಆದ್ಮಿ ಸರ್ಕಾರವನ್ನ ಕೆಡವಲು ಬಿಜೆಪಿ ಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ನಮ್ಮ ಶಾಸಕರನ್ನ ಖರೀದಿಸಲು ಮುಂದಾಗಿದೆ, ಪ್ರತಿ ಶಾಸಕರಿಗೆ 25 ಕೋಟಿ ರೂ ಆಮಿಷ ಒಡ್ಡುತ್ತಿದೆ. ನಮ್ಮ ಏಳು ಶಾಸಕರನ್ನು ಸಂಪರ್ಕಿಸಿ ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ನನ್ನನ್ನ ಯಾವುದೇ ಹಗರಣದಲ್ಲಿ ಬಂಧಿಸಲು ಆಗುತ್ತಿಲ್ಲ,ಅದಕ್ಕಾಗಿ ನಮ್ಮ ಸರ್ಕಾರವನ್ನೇ ಕೆಡವಲು ಬಿಜೆಪಿ ಯತ್ನಿಸುತ್ತಿದೆ ಅದಕ್ಕಾಗಿ ಸಂಚು ರೂಪಿಸುತ್ತಿದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.