9ನೆ ಬಾರಿಗೆ ಬಿಹಾರ ಮುಖ್ಯ ಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ

ಪಾಟ್ನ: ರೋಚಕ ತಿರುವು ಪಡೆದು ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರದ ರಾಜಕೀಯ, ನಿತೀಶ್‌ ಕುಮಾರ್‌ ಅವರು ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸಧ್ಯ ಎಲ್ಲ ಬೆಳವಣಿಗೆಗೆ ಅಂತ್ಯ ಹಾಡಲಾಗಿದೆ.

ನಿತೀಶ್‌ ಕುಮಾರ್‌ ಅವರು 9 ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಿತೀಶ್‌ ಕುಮಾರ್‌ ತಮ್ಮ ಪಕ್ಷದೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿ ಆಡಳಿತ ನಡೆಸಲಿದ್ದಾರೆ.

ನಿತೀಶ್ ಕುಮಾರ್ ಪ್ರಮಾಣ‌ ವಚನ‌ ಸ್ವೀಕರಿಸಿದ ನಂತರ ಬಿಹಾರದ ಸಂಪುಟ ದರ್ಜೆಯ ಸಚಿವರಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್‌ ಕುಮಾರ್‌ ಸಿನ್ಹಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಬಳಿಕ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ನಮ್ಮ ಪಕ್ಷದ ನಾಯಕರ ಅಪೇಕ್ಷೆಯಂತೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದರು.

ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಜತೆಗೆ ಐ ಎನ್ ಡಿ ಐ ಎ ಒಕ್ಕೂಟದಿಂದಲೂ ಹೊರಗೆ ಬಂದಿದ್ದೇನೆ. ಮಹಾಘಟಬಂಧನ್‌ನಿಂದಲೂ ಆಚೆ ಬಂದಿದ್ದೇನೆ ಎಂದು ತಿಳಿಸಿದ್ದರು

ಇನ್ನುಮುಂದೆ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಆಡಳಿತ ನಡೆಸಲಿದ್ದು, ಸಂಜೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದು ಹೇಳಿದ್ದರು.ಅದರಂತೆ‌ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ‌
ಸ್ವೀಕಾರಿದ್ದಾಗಿದೆ ಇನ್ನು ಮುಂದೇನಾಗುತ್ತೊ ಕಾದು ನೋಡಬೇಕಿದೆ.