ಎಲ್ ಹೆಚ್ ಪವರ್ ಫುಲ್ ಮೈಂಡ್ಸ್ ಸಂಸ್ಥೆಯಿಂದ ಮೇ 9-10ರಂದು ವಿಶೇಷ ಕಾರ್ಯಕ್ರಮ

ಮೈಸೂರು, ಮೇ 2- ಎಲ್ ಹೆಚ್ ಪವರ್ ಫುಲ್ ಮೈಂಡ್ಸ್ ಸಂಸ್ಥೆಯು ರಾಷ್ಟ್ರ ಅಭಿವೃದ್ಧಿಗೊಳಿಸುವ ಕಡೆಗೆ ಕಾರ್ಯನಿರ್ವಹಿಸುತ್ತಿದ್ದು ಮೇ 9 ಮತ್ತು 10ರಂದು ವಿಶೇಷ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಸ್ಥೆಯ ಆಪ್ತ ಸಮಾಲೋಚಕರಾದ ವೇಧಪ್ರದ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಇಂದು ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಲ್.ಹೆಚ್ ಪವರ್‌ಫುಲ್ ಮೈಂಡ್ಸ್ ಕುಟುಂಬ ಅಭಿವೃದ್ಧಿಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಮೇ 9ರಂದು ಬೆಳಗ್ಗೆ 9.30ರಿಂದ 10 ರಂದು ಮಧ್ಯಾಹ್ನ 12.30 ವರೆಗೆ ಕಾರ್ಯಕ್ರಮ ‌ವನ್ನು ಮೈಸೂರಿನ 3* ರೆಸಾರ್ಟ್ ನಲ್ಲಿ ಆಯೋಜಿಸ ಲಾಗಿದೆ ಎಂದು ಅವರು ತಿಳಿಸಿದರು.

ಕುಟುಂಬದ ಸಂಪೂರ್ಣ ಬೆಳವಣಿಗೆಗೆ ಸಕಾರಾತ್ಮಕ ಮನೋವಿಜ್ಞಾನದ ತಂತ್ರಗಳು, ಕುಟುಂಬದ ಭಾಂದವ್ಯಕ್ಕಾಗಿ ಮೋಜಿನ ಆಟಗಳು, ಕ್ಷಮಿಸುವ ಕಲೆ, ಕುಟುಂಬದಲ್ಲಿ ಆಧ್ಯಾತ್ಮಿಕತೆ, ಆರ್ಥಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣವಾಗುವುದನ್ನು ತಿಳಿಸುವುದು, ಸುವರ್ಣ ಆರೋಗ್ಯ (ಹೃದಯಘಾತ ಮತ್ತು ಇತರ ತುರ್ತು ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಪ್ರಾಯೋಗಿಕ ಅನುಭವ)ದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು.

ದೊಡ್ಡವರಿಗೆ ತಲಾ 4,500 ರೂ, ಮಕ್ಕಳಿಗೆ (10 ರಿಂದ 18 ವರ್ಷದವ ವರ್ಷದವರಿಗೆ) 3,500 ರೂ, ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕುಟುಂಬಗಳಿಗೆ ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳು ಮತ್ತು ಪೋಷಕರಿಬ್ಬರಿಗೂ ಸಾಕಷ್ಟು ಆತ್ಮಾವಲೋಕನ ಮಾಡಿಕೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಯು ಒಂದು ಉದ್ದೇಶಕ್ಕಾಗಿ ಹುಟ್ಟಿದ್ದಾರೆ. ಪ್ರತಿಯೊಬ್ಬರು ತಮ್ಮ ಸ್ವಂತ ಮನಸ್ಸನ್ನು ತರಬೇತಿ ಮಾಡುವ ಮೂಲಕ ತಮ್ಮ ಪೂರ್ಣ ಸಾಮರ್ಥ್ಯಕ್ಕೆ ಬೆಳೆಯಬಹುದು ಎಂದು ವೇಧಪ್ರದ‌ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಮೃತ ಅವರೊಂದಿಗೆ ದಿಶಾ ಸಮ್ಯಮಿ, ಭುವನ ಶ್ರಾವ್ಯ, ಪ್ರಿಯಾಂಕ, ಜಾನ್ಹವಿ ಉಪಸ್ಥಿತರಿದ್ದರು.