ಕೆ.ಆರ್.ನಗರ ಅಭಿವೃದ್ಧಿ ಬಗ್ಗೆ ಸಾರ್ವಜನಿಕ ವಾಗಿ ಚರ್ಚೆಗೆ ಸಿದ್ದ:ಸಾ.ರಾ ಮಹೇಶ್

ಮೈಸೂರು: ಕೆ.ಆರ್.ನಗರದ ಅಭಿವೃದ್ಧಿ ಬಗ್ಗೆ ಸಾರ್ವಜನಿಕವಾಗಿಯೇ ಚರ್ಚೆಗೆ ಸಿದ್ದ,ನೀವೂ ಬನ್ನಿ ಎಂದು ಮಾಜಿ ಶಾಸಕ ಸಾ.ರಾ ಮಹೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,ಎರಡು ವರ್ಷದ ಹಿಂದೆ ಆಗಿದ್ದ ಸೇತುವೆಯನ್ನು ಈಗ ಸಿಎ‌ಂ‌ ಕೆ.ಆರ್.‌ ನಗರದಲ್ಲಿ ಉದ್ಘಾಟಿಸಿದ್ದಾರೆ ಎಂದು ಟೀಕಿಸಿದರು.

ಹಳೆಯ ಕಾಮಗಾರಿಗಳನ್ನು ಉದ್ಘಾಟನೆ ಮಾಡಿ ಸಿಎಂ ಭಾಷಣ ಮಾಡಿ ಹೋಗಿದ್ದಾರೆಂದು ಸಾರಾ ಮಹೇಶ್ ವ್ಯಂಗ್ಯ ವಾಡಿದರು.

ನಾನು ಕೆ.ಆರ್. ನಗರ ಕ್ಷೇತ್ರ ಹಾಳು ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ನಾನು ಮಾಡಿರುವ ಕಾಮಗಾರಿಗಳನ್ನು ಯಾಕೆ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದರು ಎಂದು ಪ್ರಶ್ನಿಸಿದರು.

ನಾನು ಯಾವುದದರೂ ಗುತ್ತಿಗೆದಾರನ ಬಳಿ ಒಂದು ರೂಪಾಯಿ ಪಡೆದಿದ್ದರೆ ತೋರಿಸಿ ಎಂದು ಸಾರಾ ಮಹೇಶ್ ಸವಾಲು ಹಾಕಿದರು.

ಇಡೀ ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ದೂರಿದ ಅವರು, ಕೆ.ಆರ್. ನಗರದಲ್ಲಿ ಈಗ ಕೆಲವರು ಬೇರೆ ಬೇರೆ ಕಡೆಯಿಂದ ಬಂದು ಇಸ್ಪೀಟ್ ಆಡುತ್ತಿದ್ದಾರೆ ಇದು ಪೊಲೀಸರ ಗಮನಕ್ಕೆ ಬಂದಿಲ್ಲವೆ ಎಂದು ಸಾ.ರಾ.ಮಹೇಶ್ ಕಾರವಾಗಿ ಪ್ರಶ್ನಿಸಿದರು.