ಅಕ್ರಮವಾಗಿ ದಾಸ್ತಾನಿರಿಸಿದ್ದ ಪಡಿತರ ಅಕ್ಕಿ ವಶ

ಕೊಳ್ಳೇಗಾಲ: ಪಡಿತರ ಅಕ್ಕಿ ಕಳ್ಳರ ಮೇಲೆ ದಾಳಿ ಮುಂದುವರಿಸಿರುವ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್ ಅವರು ತಮ್ಮ ಹಿರಿಯ ಅಧಿಕಾರಿಗಳೊಡನೆ ದಾಳಿ ನಡೆಸಿ ಮನೆಯೊಂದರ ಮುಂದೆ ಅಕ್ರಮವಾಗಿ ದಾಸ್ತಾನಿರಿಸಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಹೊಸಮಾಲಂಗಿ ಗ್ರಾಮದ ಶಿವಸ್ವಾಮಿ ಎಂಬವರ ಮನೆ ಮುಂಬಾಗ 27 ಪ್ಲಾಸ್ಟಿಕ್ ಚೀಲಗಳಲ್ಲಿ1310 ಕೆ.ಜಿ ತೂಕವುಳ್ಳ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು.

ಈ ಬಗ್ಗೆ ಆಹಾರ ನಿರೀಕ್ಷಕ ಪ್ರಸಾದ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿರಶ್ತೇದಾರ್ ವಿಶ್ವನಾಥ್ ಅವರೊಡನೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಆರೋಪಿ ಪರಾರಿಯಾಗಿದ್ದು ಅಕ್ಕಿಯನ್ನು ಜಪ್ತಿಮಾಡಿರುವ ಆಹಾರ ಇಲಾಖೆಯ ಅಧಿಕಾರಿಗಳು ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅದರ ಮಾಂಬಳ್ಳಿ ಠಾಣೆ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಆರೋಪಿ ಗ್ರಾಮದ ಜನರಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ರೈಸ್ ಮಿಲ್ ಗೆ ಮಾರಾಟ ಮಾಡಲು ದಾಸ್ತಾನಿರಿಸಿದ್ದ ಎಂದು ದಾಳಿಯ ವೇಳೆ ತಿಳಿದು ಬಂದಿದೆ.