ಮೈಸೂರು ಅರಮನೆಯಲ್ಲಿ ಯೋಗಪ್ರದರ್ಶನ

ಮೈಸೂರು: 11ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ ಯೋಗಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನ ಗಣ್ಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ಬಾರಿ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದಡಿ ಯೋಗ ದಿನಾಚರಣೆ ಆಚರಿಸಲಾಯಿತು.

ಯೋಗ ದಿನಾಚರಣೆಯಲ್ಲಿ ಸಾವಿರಾರು ಯೋಗಪಟುಗಳು ಭಾಗಿಯಾಗಿ ವಿವಿದ ಯೋಗ ಭಂಗಿಗಳನ್ನ ಪ್ರದರ್ಶಿಸಿದರು.

ಇದೇ ಮೊದಲ ಬಾರಿ ಅಂಧ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದರು.

ಮೂರು ಬಾರಿ ಶಂಖ ನಾದ ಮೊಳಗಿಸುವ ಮೂಲಕ ಯೋಗಾಸನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯ‌ರ್, ಶಾಸಕ ಶ್ರೀವತ್ಸ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ನಗರ ಪೊಲೀಸ್‌ ಆಯುಕ್ತ ಸೀಮಾ ಲಾಟ್ಕರ್ ಸೇರಿದಂತೆ ಮತ್ತಿತರ ಪ್ರಮುಖರು ಭಾಗಿಯಾಗಿದ್ದರು.

ಹಲವು ಮಂದಿ ವಿದೇಶಿಗರು ಕೂಡ ಭಾಗಿಯಾಗಿದ್ದರು.