ಹುಚ್ಚು ನಾಯಿತರ ವರ್ತಿಸುತ್ತಿರುವ ದೇವರ ಬಸವನಿಗೆ ಬೇಕಿದೆ ಚಿಕಿತ್ಸೆ!

ಮೈಸೂರು: ಹುಚ್ಚು ನಾಯಿ ದೇವಾಲಯದ ಬಸವನಿಗೆ ಕಡಿದಿದ್ದು ಈಗ ಬಸವ ಕೂಡಾ ಅದೇ ವರ್ತಿಸುತ್ತಿದ್ದು,ಜನ ಹೊರ ಬರಲು ಹೆದರುತ್ತಿದ್ದಾರೆ.

ಇದು ಎಲ್ಲಿ ಅಂತೀರಾ,
ಮೈಸೂರಿನ ಮೇಟಗಳ್ಳಿಯಲ್ಲಿ ಜನರಿಗೆ ಇಂತಹ ಆತಂಕ ಎದುರಾಗಿಬಿಟ್ಟಿದೆ.

ಹೂಟಗಳ್ಳಿಯ ಮಹಾಲಿಂಗೇಶ್ವರ ದೇವಾಲಯಕ್ಕೆ ಸೇರಿದ ಬಸವನಿಗೆ ಹಾಗೂ ಇಲ್ಲಿನ ಜನತೆಗೆ ರಕ್ಷಣೆ ಬೇಕಿದೆ.

ಅಲ್ಲದೆ ಬಸವನಿಗೆ ಸೂಕ್ತ ವೈದ್ಯೋಪಚಾರವೂ ಬೇಕಿದೆ.

ಬಸವನಿಗೆ ಕೆಲ ದಿನಗಳ ಹಿಂದೆ ಹುಚ್ಚುನಾಯಿ ಕಡಿದಿದ್ದು,ಅದೂ ಕೂಡಾ ಹುಚ್ಚುನಾಯಿಯಂತೆ ವರ್ತಿಸುತ್ತಾ ಬೊಗಳುತ್ತಾ ಓಡಾಡುತ್ತಿದೆ.ಇದರಿಂದ‌ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಹೆದರಿತ್ತಿದ್ದಾರೆ.

ಬಸವನ ಹುಚ್ಚು ವರ್ತನೆ ಹೆಚ್ಚಾದ ಹಿನ್ನಲೆ ಸ್ಥಳೀಯರು ಅಪಾಯವನ್ನ ಲೆಕ್ಕಿಸದೆ ಹಿಡಿದು ಕಟ್ಟಿಹಾಕಿದ್ದಾರೆ.

ಹುಚ್ಚಾಗಿ ವರ್ತಿಸುತ್ತಿರುವ ಬಸವನಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಿದೆ

ಅದಕ್ಕಾಗಿ ಸ್ಥಳೀಯರು ಪಶು ವೈದ್ಯರ ನೆರವಿಗಾಗಿ ಹುಡುಕುತ್ತಿದ್ದಾರೆ.ವೈದ್ಯರು ಸಿಗದೆ,ಬಸವನ ಸ್ಥಿತಿಯನ್ನು ನೋಡಲಾಗದೆ ಮರುಗುತ್ತಿದ್ದಾರೆ‌

ಹುಚ್ಚುನಾಯಿಯಿಂದ ಕಡಿಸಿಕೊಂಡು ನಾಯಿಯಂತೆ ವರ್ತಿಸುತ್ತಿರುವ ಬಸವನಿಗೆ ಸೂಕ್ತ ಚಿಕಿತ್ಸೆ ಬೇಕಿದೆ.ಕೂಡಲೇ ಪಶು ವೈದ್ಯಕೀಯ ಇಲಾಖೆ ಇತ್ತ ಗಮನ ಹರಿಸಲಿ