ಮೈಸೂರು: ಪಾಪ ಕೋತಿ ಮರಿ ಮೃತಪಟ್ಟಿದೆ,ಏನು ಮಾಡೋದು ಅಂತ ತೋಚದೆ, ಮರಿಯನ್ನ ಬಿಟ್ಟಿರಲಾರದೆ ತಾಯಿಅಳುತ್ತಾ ಮರಿಯೊಂದಿಗೆ ಅಲೆದಾಡುತ್ತಿದ್ದ ದೃಷ್ಯ ಎಂತವರ ಮನವನ್ನೂ ಕಲಕುವಂತಿತ್ತು.
ಮರಯನ್ನ ಮಡಿಲಿನಲ್ಲಿಟ್ಟುಕೊಂಡು ತಾಯಿ ಅಸಹಾಯಕತೆಯಿಂದ ಓಡಾಡುತ್ತಿದ್ದ ಮನಕಲುಕುವ ದೃಶ್ಯ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಂಡುಬಂದಿತು.
ಎರಡು ದಿನಗಳ ಹಿಂದೆ ಮರಿ ಮೃತಪಟ್ಟಿದೆ.ತಾಯಿ ಅದನ್ನ ಹೊತ್ತುಕೊಂಡು ಸ್ಥಳಗಳನ್ನ ಬದಲಾಯಿಸುತ್ತಾ ಮೂಕರೋಧನೆ ಅನುಭವಿಸುತ್ತಿತ್ತು.
ಕೋತಿಮರಿಯ ಮೃತದೇಹ ಕೊಳೆತಿದ್ದರೂ ಬಿಡದೆ ತನ್ನ ಮಡಿಲಿನಲ್ಲಿಟ್ಟು ಆರೈಕೆ ಮಾಡಲು ಯತ್ನಿಸುವ ದೃಶ್ಯ ನೋಡುಗರ ಮನಕಲುಕುವಂತೆ ಮಾಡಿದೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸೈಕಲ್ ಸ್ಟ್ಯಾಂಡ್ ನ ಯುವಕ ಯಶ್ವಂತ್ ಮೃತ ಕೋತಿ ಮರಿಯನ್ನ ನೋಡಿ ಮರುಗಿ ಕಡೆಗೆ ಏನೇನೊ ಮಾಡಿ ಮರಿಯನ್ನು ತಾಯಿಯಿಂದ ಬೇರ್ಪಡಿಸಿ ಹೂತುಹಾಕಿ ಮಾನವೀಯತೆ ಮೆರೆದಿದ್ದಾರೆ.